ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧುನಿಕ ಬದುಕಿಗೆ ಬೇಕಾದ ಐದು ಕೌಶಲ್ಯಗಳು, ಕ್ರೀಡಾಮನೋಭಾವ ಮಾನಸಿಕ ಪ್ರಭುದ್ದತೆ, ಕ್ರಿಯಾತ್ಮಕ ಕಲಿಕೆ ಆಧ್ಯಾತ್ಮಿಕ ಕಲಿಕೆ ಹಾಗೂ ಶಿಸ್ತು ಬದ್ದ ವ್ಯಕ್ತಿತ್ವ ಇದ್ದಲ್ಲಿ ಮಗು ಪರಿಪೂರ್ಣ ಶಿಕ್ಷಣ ಮೂಡಿಸಿಕೊಳ್ಳುವಲ್ಲಿ ಸಹಾಯಕವಾಗುವುದು ಎಂದು ಮುಖ್ಯಾಡಳಿತಾಧಿಕಾರಿ ಡಾ.ನಾಗರಾಜ ತಿಳಿಸಿದರು.
ಪಿಇಎಸ್‌ಪಬ್ಲಿಕ್ ಶಾಲೆಯಲ್ಲಿ ನಡೆದ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಕಿಂಡರ್ ಗಾರ್ಡನ್ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಸನ್ಮಾನಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಐಐಟಿ, ಜೆಇಇ ತರಬೇತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪಿಇಎಸ್‌ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಸೋಮಶೇಖರಯ್ಯ, ಶಿಕ್ಷಕ ವರ್ಗ, ಪೋಷಕರು ಭಾಗವಹಿಸಿದ್ದರು. ಕಿಂಡರ್ ಗಾರ್ಡನ್ ವಿದ್ಯಾರ್ಥಿಗಳಿಂದ ಹಾಡು, ನೃತ್ಯಗಳೊಂದಿಗೆ ಅತ್ಯಂತ ಹರ್ಷದಾಯಕಾವಗಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದ ಕುರಿತು ಯುಕೆಜಿ ಮಕ್ಕಳಾದ ಕುಮಾರಿ ರಿಷಿಕಾ ಸ್ವಾಗತವನ್ನು, ನಿರೂಪಣೆ ಚಿರಾಗ್, ಲಾಸ್ಯ ಮತ್ತು ವಿಸ್ಮಿತಾ ಹಾಗೂ ವಂದನಾಪರ್ಣೆಯನ್ನು ವಿಲೋಕ್ ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















