No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Thursday, February 5, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಕೌಶಲ್ಯ ನಿಂತ ನೀರಲ್ಲ, ಕಾಲಕಾಲಕ್ಕೆ ಬದ್ದತೆಯಿಂದ ಅಪ್‍ಡೇಟ್ ಮಾಡಿಕೊಳ್ಳಬೇಕು…

ಮಿನಿ ಉದ್ಯೋಗ ಮೇಳ ಉದ್ಘಾಟಿಸಿ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಹೇಳಿಕೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 26, 2021
in ಶಿವಮೊಗ್ಗ
0
ಕೌಶಲ್ಯ ನಿಂತ ನೀರಲ್ಲ, ಕಾಲಕಾಲಕ್ಕೆ ಬದ್ದತೆಯಿಂದ ಅಪ್‍ಡೇಟ್ ಮಾಡಿಕೊಳ್ಳಬೇಕು…
Share on FacebookShare on TwitterShare on WhatsApp
ಕಲ್ಪ ಮೀಡಿಯಾ ಹೌಸ್

ಶಿವಮೊಗ್ಗ: ಯಾವುದೇ ಉದ್ಯೋಗದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಬಹಳ ಮುಖ್ಯವಾಗುತ್ತದೆ. ನಾವೆಲ್ಲವರೂ ಒಂದೊಂದು ವಿಭಿನ್ನ ಕೌಶಲ್ಯವನ್ನು ಹೊಂದಿದ್ದು, ಆ ಕೌಶಲ್ಯಕ್ಕೆ ಚುರುಕು ನೀಡಿ, ಶ್ರಮ ವಹಿಸಿ ಬದ್ದತೆಯಿಂದ ಅದರಲ್ಲೇ ಮುಂದುವರೆದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ತಿಳಿಸಿದರು.

ಜಿಲ್ಲಾಡಳಿತ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಿನಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ

ಉದ್ಯೋಗ ಮೇಳಗಳಿಂದ ಯುವಜನತೆಗೆ ಬಹಳ ಅನುಕೂಲವಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಮುಕ್ತವಾಗಿ ಯುವಜನ ಮೇಳ ಹಮ್ಮಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಕೋವಿಡ್ ಇಳಿಮುಖವಾಗಿರುವುದರಿಂದ ಕೋವಿಡ್ ನಿಯಮಾವಳಿಗಳ ಅನುಸರಣೆ ಷರತ್ತಿಗೊಳಪಟ್ಟು ಆಯೋಜನೆ ಮಾಡಿರುವುದು ಸ್ವಾಗತಾರ್ಹ. ಕೋವಿಡ್ ಕಾರಣದಿಂದ ದೇಶದಲ್ಲಿ ಸಾಕಷ್ಟು ಆರ್ಥಿಕ ಹಿನ್ನಡೆಯಾಗಿದೆ. ಆರ್ಥಿಕತೆಯನ್ನು ಸಬಲಗೊಳಿಸಲು ಎಲ್ಲರ ಶ್ರಮ ಅಗತ್ಯವಾಗಿದ್ದು, ಈಗ ಆರ್ಥಿಕ ಚಟುವಟಿಕೆಗಳು ಸ್ವಲ್ಪ ಚೇತರಿಕೆ ಕಾಣುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ದಿ ಇಲಾಖೆ ವತಿಯಿಂದ ಸಾಕಷ್ಟು ಕೌಶಲ್ಯಗಳಲ್ಲಿ ತರಬೇತಿಗಳು, ಉದ್ಯೋಗಾವಕಾಶಗಳು ಲಭ್ಯವಿದ್ದು ಅದರ ಪ್ರಯೋಜನವನ್ನು ಯುವಜನತೆ ಪಡೆಯಬೇಕು ಎಂದರು.

ಆರ್ಥಿಕ ಸಂಕಷ್ಟದಿಂದಾಗಿ ಎಷ್ಟೋ ವಿದ್ಯಾರ್ಥಿಗಳಿಗೆ ಓದು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಕೌಶಲ್ಯ ಗುರುತಿಸಿ ಉದ್ಯೋಗ ಮಾಡುತ್ತಲೇ ಓದನ್ನು ಮುಂದುವರೆಸಬೇಕು. ವಿದ್ಯಾರ್ಥಿ ಜೀವನದಲ್ಲಿ ಕೇವಲ ಸುಖ ಬೇಕೆಂದು ನಿರೀಕ್ಷಿಸಿದರೆ ಮುಂದಿನ ಜೀವನ ಕಷ್ಟ ಪಡಬೇಕಾಗುತ್ತದೆ. ಆದ ಕಾರಣ ವಿದ್ಯಾರ್ಥಿ ದೆಸೆಯಲ್ಲಿ ಶ್ರಮ ವಹಿಸಿ ಬದ್ದತೆಯಿಂದ ಓದಿದಲ್ಲಿ ಯಶಸ್ಸು ಸಾಧ್ಯ. ಕೌಶಲ್ಯ ಎನ್ನುವುದು ನಿಂತ ನೀರಲ್ಲ. ಅದನ್ನು ಕಾಲಕಾಲಕ್ಕೆ ಬದ್ದತೆಯಿಂದ ಅಪ್‍ಡೇಟ್ ಮಾಡಿಕೊಳ್ಳಬೇಕು ಎಂದರು.

ಅವಕಾಶಗಳನ್ನು ಬಳಸಿಕೊಂಡು ಸಾಮರ್ಥ್ಯವನ್ನು ವೃದ್ದಿಸಿಕೊಂಡು ಅನುಭವ ಪಡೆಯುತ್ತಾ ಸಾಗಿದಲ್ಲಿ ಮುಂದೆ ನೀವು ನೂರು ಜನರಿಗೆ ಕೆಲಸ ನೀಡುವಂತೆ ಆಗಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಮಾತನಾಡಿ, ಇಂತಹ ಉದ್ಯೋಗ ಮೇಳಗಳು ಯುವಜನತೆಯ ಜೀವನಕ್ಕೆ ಒಂದು ದಾರಿಯಾಗಿದೆ. ಇಂದು ನಾವು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಅದೇನೆಂದರೆ, ಪ್ರಸ್ತುತದಲ್ಲಿ ಉದ್ಯೋಗಾವಕಾಶಗಳು ಇವೆ, ಆಕಾಂಕ್ಷಿಗಳೂ ಇದ್ದಾರೆ. ಆದರೆ ಅದಕ್ಕೆ ತಕ್ಕನಾದ ಕೌಶಲ್ಯದ ಕೊರತೆಯಿಂದ ಉದ್ಯೋಗಾವಕಾಶಗಳು ಸದ್ಬಳಕೆ ಆಗುತ್ತಿಲ್ಲ. ಉದ್ಯೋಗದಲ್ಲಿ ಉತ್ತಮ ಸಾಮರ್ಥ್ಯ ಬೇಕೆಂದರೆ ಕೌಶಲ್ಯ ಅಗತ್ಯವಾಗಿ ಬೇಕು. ಆದ ಕಾರಣ ಪ್ರತಿಯೊಬ್ಬರೂ ಕೌಶಲ್ಯಾಭಿವೃದ್ದಿಗೆ ಒತ್ತು ನೀಡಬೇಕು ಎಂದು ಹೇಳಿದರು.

ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮನೆಯಲ್ಲಿಯೇ ಕುಳಿತು ಕೌಶಲ್ಯ ಪಡೆಯುವ, ಕೆಲಸ ಮಾಡುವ ಅನೇಕ ಅವಕಾಶಗಳಿವೆ. ಒಬ್ಬರಲ್ಲೇ ವಿವಿಧ ಕೌಶಲ್ಯ ಬೇಡುವ ಕೆಲಸಗಳು ಇಂದು ಇದ್ದು, ಅದಕ್ಕೆ ತಯಾರಾಗಬೇಕು. ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಇಲಾಖೆಯಿಂದ ಸಹ ಸಾಕಷ್ಟು ಸೌಲಭ್ಯಗಳು ಇದ್ದು ಅದರ ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದು ಹಾರೈಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸುದೇವ ಮಾತನಾಡಿ, ತಮ್ಮ ಜೀವನಾನುಭವವನ್ನೇ ಹಂಚಿಕೊಂಡು, ಯುವಜನತೆ ತಮ್ಮ ಉದ್ಯೋಗದ ಬಗ್ಗೆ ಕನಸು ಕಟ್ಟಬೇಕು. ತಾವೂ ಸಹ ಬಡ ಕುಟುಂಬದ ಹಿನ್ನೆಲೆಯಲ್ಲಿ ಹುಟ್ಟಿ, ಬೆಳೆದು ಚಿಕ್ಕ ವಯಸ್ಸಿನಲ್ಲಿಯೇ ಇಂತಹದ್ದೇ ಉದ್ಯೋಗದಲ್ಲಿ ಉನ್ನತಿ ಪಡೆಯಬೇಕೆಂದು ಕನಸು ಕಟ್ಟಿದ್ದು, ಆ ನಿಟ್ಟಿನಲ್ಲಿಯೇ ಔದ್ಯೋಗಿಕವಾಗಿ ಯಶಸ್ವಿಯಾದ ಬಗ್ಗೆ ಅವರು ತಿಳಿಸಿದರು.

ತಮ್ಮಲ್ಲಿರುವ ಒಂದು ಕೌಶಲ್ಯವನ್ನು ಗುರುತಿಸಿ, ಅದರಲ್ಲಿ ತರಬೇತಿ ಹೊಂದಿ ಮುಂದೆ ಬರಬೇಕು. ಉದ್ಯೋಗಾವಕಶಾಗಳಿಗೆ ಇಂದು ಕೊರತೆ ಇಲ್ಲ. ಆದರೆ ಕೌಶಲ್ಯದ ಕೊರತೆ ಇದೆ. ಹಾಗಾಗಿ ತಮ್ಮಲ್ಲಿನ ಕೌಶಲ್ಯ ವೃದ್ದಿಸಿಕೊಳ್ಳಬೇಕು. ಜೊತೆಗೆ ಒಂದು ಸಂಸ್ಥೆಗೆ ಸೇರಿ ಇಂತಿಷ್ಟು ವೇತನ ಬೇಕೆಂದು ನಿರೀಕ್ಷಿಸುವ ನಾವು ಆ ಸಂಸ್ಥೆಗೆ ಉತ್ತಮವಾದದ್ದನ್ನು ಕೊಡಬೇಕೆಂದು ಸಂಕಲ್ಪ ಮಾಡಬೇಕು ಎಂದರು.

ಮಹಿಳಾ ಉದ್ಯಮಿಗಳಾಗಲು ಸರ್ಕಾರ ಅನೇಕ ಅವಕಾಶಗಳನ್ನು ನೀಡಿದ್ದು, ಮಹಿಳೆಯರು ಮುಂದೆ ಬರಬೇಕು. ಹಾಗೂ ಮಹಿಳೆಯರು ಕೆಲವೇ ಕೆಲಸಗಳಿಗೆ ಸೀಮಿತವಾಗದೇ ಮಾರುಕಟ್ಟೆ ವ್ಯವಸ್ಥೆಗೂ ಹೆಜ್ಜೆ ಇಡಬೇಕೆಂದು ಆಶಿಸಿದರು.

ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ.ಸುರೇಶ್ ಮಾತನಾಡಿ, ಹಿಂದೆ ಜ್ಞಾನಕ್ಕೆ ಬಹಳ ಮಹತ್ವ ಇತ್ತು. ಆದರೆ ಇಂದು ಜ್ಞಾನದೊಂದಿಗೆ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ಇದ್ದು, ನಮ್ಮಲ್ಲಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಗುರುತಿಸಿಕೊಂಡು ಆ ನಿಟ್ಟಿನಲ್ಲಿ ತರಬೇತಿ ಹೊಂದಿ ಅಭಿವೃದ್ದಿಪಡಿಸಿಕೊಂಡಲ್ಲಿ ಯಾರಿಗೂ ಉದ್ಯೋಗಾವಕಾಶ ಕೊರತೆ ಕಾಡುವುದಿಲ್ಲ. ಇಂದಿನ ಮಿನಿ ಉದ್ಯೋಗ ಮೇಳದಲ್ಲಿ ಬಹುತೇಕ ಸ್ಥಳೀಯವಾದ 25 ಉದ್ಯೋಗದಾತ ಕಂಪೆನಿಗಳು ಭಾಗವಹಿಸಿದ್ದು, 7 ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲಾಗುವುದು. ಸುಮಾರು 800 ಜನರಿಗೆ ಉದ್ಯೋಗಾವಕಾಶ ನೀಡುವ ಅವಕಾಶ ಇದ್ದು ಸುಮಾರು 2 ಸಾವಿರ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆಂದು ಮಾಹಿತಿ ನೀಡಿದ ಅವರು ಸರ್ಕಾರದ ಕೌಶಲ್ಯ ತರಬೇತಿಗಳ ಮಾಹಿತಿ ಪಡೆದು ಉಪಯೋಗ ಪಡೆಯುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಎಸ್.ನಾಗಭೂಷಣ್, ಕೌಶಲ್ಯಾಭಿವೃದ್ದಿ ಇಲಾಖೆ ಇತರೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೌಶಲ್ಯಾಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ನಾಯಕ್ ಸ್ವಾಗತಿಸಿದರು. ಸಮನ್ವಯ ಕಾಶಿ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnd NewsNews in KannadaNews KannadaShimogaShivamoggaShivamogga Newsಮಲೆನಾಡು_ಸುದ್ಧಿಮಿನಿ ಉದ್ಯೋಗ ಮೇಳಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Previous Post

ಜೀವನದಲ್ಲಿ ಜಿಗುಪ್ಸೆ ಹಿನ್ನೆಲೆ ಒಂದೇ ಕುಟುಂಬದ ನಾಲ್ವರು ಎಮ್‌ಸಿ ಹಳ್ಳಿ ಬಳಿ ಆತ್ಮಹತ್ಯೆಗೆ ಯತ್ನ

Next Post

ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ಗೆ ಮೂರು ರಾಷ್ಟ್ರೀಯ ಪ್ರಶಸ್ತಿ…

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ಗೆ ಮೂರು ರಾಷ್ಟ್ರೀಯ ಪ್ರಶಸ್ತಿ…

ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ಗೆ ಮೂರು ರಾಷ್ಟ್ರೀಯ ಪ್ರಶಸ್ತಿ...

Leave a Reply Cancel reply

Your email address will not be published. Required fields are marked *

  • Trending
  • Latest
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ಕೃಷಿ ತ್ಯಾಜ್ಯದಿಂದ ನವೀನ ಪ್ಯಾಕೇಜಿಂಗ್ ಪರಿಹಾರ ಅಭಿವೃದ್ಧಿಪಡಿಸಲು ಅಮೆಜಾನ್ – ಐಐಟಿ ರೂರ್ಕಿ ಸಹಭಾಗಿತ್ವ

ಕೃಷಿ ತ್ಯಾಜ್ಯದಿಂದ ನವೀನ ಪ್ಯಾಕೇಜಿಂಗ್ ಪರಿಹಾರ ಅಭಿವೃದ್ಧಿಪಡಿಸಲು ಅಮೆಜಾನ್ – ಐಐಟಿ ರೂರ್ಕಿ ಸಹಭಾಗಿತ್ವ

February 5, 2026
ಅಮಚವಾಡಿ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ಳಿ ಮಹೋತ್ಸವ ಸಂಭ್ರಮ

ಅಮಚವಾಡಿ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ಳಿ ಮಹೋತ್ಸವ ಸಂಭ್ರಮ

February 5, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಬೆಂಗಳೂರು-ಹುಬ್ಬಳ್ಳಿ ಶತಾಬ್ದಿ, ಚಿತ್ರದುರ್ಗ ಎಕ್ಸ್’ಪ್ರೆಸ್ ಸೇರಿ ಹಲವು ರೈಲುಗಳು ಈ ದಿನ ರದ್ದು | ಇಲ್ಲಿದೆ ಡೀಟೇಲ್ಸ್

February 5, 2026
ಮಾನವ ತನ್ನ ಹೃದಯ ವೈಶಾಲ್ಯ ಬೆಳೆಸಿಕೊಳ್ಳುವ ಮಹತ್ವದ ಕೃತಿ ನಾಕುತಂತಿ: ಸುರೇಶ್ ಋಗ್ವೇದಿ

ಮಾನವ ತನ್ನ ಹೃದಯ ವೈಶಾಲ್ಯ ಬೆಳೆಸಿಕೊಳ್ಳುವ ಮಹತ್ವದ ಕೃತಿ ನಾಕುತಂತಿ: ಸುರೇಶ್ ಋಗ್ವೇದಿ

February 5, 2026
ಶಿವಮೊಗ್ಗ | ಎಸ್’ಎಂಕೆ ಫ್ಲಾಜಾ (ಸುಲ್ತಾನ್ ಡೈಮಂಡ್ಸ್ ಬಿಲ್ಡಿಂಗ್) ಪಾಲಿಕೆ ಸುಪರ್ದಿಗೆ

ಶಿವಮೊಗ್ಗ | ಎಸ್’ಎಂಕೆ ಫ್ಲಾಜಾ (ಸುಲ್ತಾನ್ ಡೈಮಂಡ್ಸ್ ಬಿಲ್ಡಿಂಗ್) ಪಾಲಿಕೆ ಸುಪರ್ದಿಗೆ

February 5, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL