ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇನ್ನರ್ ವ್ಹೀಲ್ ಸಂಸ್ಥೆಯ ಮಹಿಳಾ ತಂಡವು ಅತ್ಯಂತ ಉತ್ಸಾಹದಿಂದ ವಿಶೇಷಚೇತನ ಮಕ್ಕಳಿಗೆ ವಸ್ತುಗಳನ್ನು ನೀಡುತ್ತಿರುವ ಅವರ ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ ಎಂದು ಸರ್ಜಿ ಫೌಂಡೇಷನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ Dr. Dhananjaya Sarji ಹೇಳಿದರು.
ನಗರದ ಸೋಮಿನಕೊಪ್ಪ ರಸ್ತೆಯಲ್ಲಿರುವ ವಿಶೇಷಚೇತನ ಮಕ್ಕಳ ತರಬೇತಿ ಕೇಂದ್ರ ಸರ್ಜಿ ಇನ್‍ಸ್ಟಿಟ್ಯೂಟ್ ಮತ್ತು ಇನ್ನರ್ ವ್ಹೀಲ್ ಈಸ್ಟ್ ಶಿವಮೊಗ್ಗ ಇವರ ಸಹಯೋಗದಲ್ಲಿ ಸರ್ಜಿ ಇನ್‍ಸ್ಟಿಟ್ಯೂಟ್ ನಲ್ಲಿ ವಿಶೇಷಚೇತನ ಮಕ್ಕಳಿಗೆ ಟ್ರೆಡ್‍ಮಿಲ್, ವಾಕರ್ ಹಾಗೂ ಸೈಕಲ್‍ಗಳನ್ನು ಕೊಡುಗೆಯಾಗಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಪ್ರತಿ ರಂಗದಲ್ಲೂ ತಮ್ಮದೇ ಆದ ಛಾಫು ಮೂಡಿಸಿದ್ದಾರೆ. ನಾಲ್ಕು ಗೋಡೆಗೆ ಸೀಮಿತಗೊಳ್ಳದೇ ಸಮಾಜಮುಖಿಯಾಗಿಯೂ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದರು.
ಇನ್ನರ್ ವ್ಹೀಲ್ ಈಸ್ಟ್‍ನ ಅಧ್ಯಕ್ಷರಾದ ಶ್ವೇತಾ ಆಶಿಕ್ ಮಾತನಾಡಿ, ಪ್ರತಿ ವರ್ಷವೂ ನಮ್ಮ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ, ಅದರ ಭಾಗವಾಗಿ ಇಂದು ಜನರಿಂದ ದೇಣಿಗೆ ರೂಪದಲ್ಲಿ ಸಂಗ್ರಹವಾದ ಹಣದಲ್ಲಿ ವಿಶೇಷಚೇತನ ಮಕ್ಕಳಿಗೆ ಕೆಲವು ಪರಿಕರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
Also read: ಉಜ್ಜಯಿನಿಯ ಬಾಬಾ ಮಹಾಕಾಲ್ ಮಂದಿರಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ: ವಿಶೇಷ ಪೂಜೆ ಸಲ್ಲಿಕೆ
ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಈಸ್ಟ್ ನ ಕಾರ್ಯದರ್ಶಿಗಳಾದ ವಾಗ್ದೇವಿ, ಡಿಸ್ಟ್ರಿಕ್ಟ್ ಚೇರ್ಮನ್ ಪೂರ್ಣಿಮಾ ರವಿ, ಡಿಸ್ಟ್ರಿಕ್ಟ್ ಕಾರ್ಯದರ್ಶಿ ಶಬರಿ ಕಡಿದಾಳ್, ಮಾಜಿ ಗವರ್ನರ್ ಸುಧಾ ಪ್ರಸಾದ್ ಹಾಗೂ ದಾನಿ ವೀಣಾ ಸುರೇಶ್, ಸರ್ಜಿ ಇನ್‍ಸ್ಟಿಟ್ಯೂಟ್‍ನ ನಿರ್ದೇಶಕಿ ನಮಿತಾ ಸರ್ಜಿ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ವಿಶೇಷಚೇತನ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post