ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಥುರಾ ಪಾರಾಡೈಸ್‍ನ ಹೋಟೆಲ್ ಮಾಲೀಕರಾದ ಗೋಪಿನಾಥ್ ಸಮಾಜಮುಖಿ ಸೇವೆಯಲ್ಲಿಯೂ ಪ್ರಸಿದ್ಧರಾಗಿದ್ದಾರೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ನಗರದ ಬಾಲರಾಜ್ ಅರಸು ರಸ್ತೆಯಲ್ಲಿ ಇರುವ ಮಥುರಾ ಪ್ಯಾರಡೈಸ್ ಹೋಟೆಲ್‍ನಲ್ಲಿ ಇಂದಿನಿಂದ ತಿಂಡಿ ಹಾಗೂ ಊಟದ ವ್ಯವಸ್ಥೆಯನ್ನು ಕಾಂಬೋ ಆಫರ್ ಸೇವೆಗೆ ಚಾಲನೆ ನೀಡಿ, ಮಾತನಾಡಿದರು.
ಹೋಟೆಲ್ ಉದ್ಯಮ ಇಂದು ಅತ್ಯಂತ ಜನಪ್ರಿಯವಾಗುತ್ತಿದೆ. ಅದರಲ್ಲೂ ಮಥುರಾ ಪಾರಾಡೈಸ್ ಹೋಟೆಲ್ ಎಂದರೆ ಎಲ್ಲರಿಗೂ ಚಿರಪರಿಚಿತವಾಗಿದೆ. ಇಲ್ಲಿನ ಮಾಲೀಕರು ಸಮಾಜ ಸೇವೆಗೂ ಹೆಸರಾಗಿದ್ದಾರೆ. ಸಮಾಜಮುಖಿ ಕೆಲಸಗಳು ವ್ಯಕ್ತಿಯ ಉದ್ಯಮವನ್ನು ಕೂಡ ಬೆಳೆಸುತ್ತದೆ ಎಂದರು.
ಈ ಹೋಟೆಲ್‍ನಲ್ಲಿ ತಿಂಡಿ ಕಾಂಬೋ ಎಂಬ ಸೇವೆ ಆರಂಭವಾಗಿದ್ದು, 100 ರೂ.ನಲ್ಲಿ ಇಡ್ಲಿ, ವಡೆ, ದೋಸೆ, ಚೌಚೌ ಬಾತ್, ಕಾಫಿ ಅಥವಾ ಟೀ ಸಿಗುತ್ತದೆ. ಸಾರ್ವಜನಿಕರು ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ತರುಣೋದಯ ಘಟಕದ ಅ.ನ. ವಿಜಯೇಂದ್ರರಾವ್ ತಿಳಿಸಿದರು.
ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕರಾದ ಗೋಪಿನಾಥ್, ಲಕ್ಷ್ಮೀ ಗೋಪಿನಾಥ್, ಆರ್‍ಎಸ್‍ಎಸ್‍ನ ಮುಖಂಡರಾದ ಗಿರೀಶ್‍ಪಟೇಲ್, ಆರ್.ಕೆ. ಸಿದ್ದರಾಮಣ್ಣ, ಉಮೇಶ್ ಜಾದವ್, ವಿಷ್ಣು, ಮೋಹನ್, ಎಸ್.ಎಸ್. ವಾಗೀಶ್, ರವೀಂದ್ರ, ನಾಗರಾಜ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post