ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರ ವ್ಯಾಪ್ತಿಯಲ್ಲಿರುವ ಸ್ಮಶಾನ ಅಭಿವೃದ್ಧಿಯ ಕುರಿತಾಗಿ ಸಾರ್ವಜನಿಕರಿಗೆ ಪಾಲಿಕೆ ಅಧಿಕಾರಿಗಳ ವಿರುದ್ಧ ನಿರ್ಲಕ್ಷದ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ನಗರದಲ್ಲೊಂದು ರುದ್ರಭೂಮಿ ಮೂಲಭೂತ ಸೌಲಭ್ಯಗಳು ಇಲ್ಲದೇ ನರಳುತ್ತಿದೆ.
ಹೌದು… ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.1ರ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿರುವ ಸ್ಮಶಾನ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿದೆ.

ಈ ಸ್ಮಶಾನಕ್ಕೆ ಸುತ್ತಲೂ ಕಾಂಪೌಂಡ್, ನೀರಿನ ವ್ಯವಸ್ಥೆ, ಓಡಾಡಲು ಸರಿಯಾದ ರಸ್ತೆ, ಇಲ್ಲೊಂದು ಲೈಟಿಂಗ್ ವ್ಯವಸ್ಥೆ ಮಾಡಿಕೊಡಬೇಕೆಂಬುದು ಇಲ್ಲಿನ ಸಾರ್ವಜನಿಕರ ಮನವಿ. ಹಲವು ವರ್ಷಗಳಿಂದ ಈ ಬಗ್ಗೆ ಹಲವರಿಗೆ ಮನವಿ ಮಾಡಿದರೂ ಇದರ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸ.
Also read: ಶಿವಮೊಗ್ಗ | ಪಾಲಿಕೆ ಬಜೆಟ್’ನಲ್ಲಿ ಸ್ಮಶಾನಗಳ ಅಭಿವೃದ್ದಿಗೆ ಹಣ ಮೀಸಲಿಡಿ
ರಸ್ತೆ ನಿರ್ಮಿಸಿ ಕೊಡಿ
ಸೋಮಿಕೊಪ್ಪ ಭೋವಿ ಕಾಲೋನಿ ಜನರು ಅಂತ್ಯಸAಸ್ಕಾರಕ್ಕೆ ಹೋಗಲು ರಸ್ತೆ ಇಲ್ಲದೇ ಮೃತ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ರೈಲು ಹಳಿ ದಾಟಿಕೊಂಡು ಹರಸಾಹಸ ಪಡುವಂತಾಗಿದೆ.
ಸ್ಮಶಾನಕ್ಕೆ ಹೋಗುವ ಮಾರ್ಗ ಮಧ್ಯೆ ರೈಲ್ವೆ ಹಳಿ ಬಂದಿದೆ. ತಗ್ಗು, ಉಬ್ಬುಗಳಿಂದ ಕೂಡಿದೆ. ಸ್ವಲ್ಪ ಯಾಮಾರಿದರೆ ಅಂತ್ಯ ಸಂಸ್ಕಾರಕ್ಕೆ ತೆರಳುವವರು ಕೈಕಾಲು ಮುರಿದುಕೊಳ್ಳುವ ಸಂಭವವಿದ್ದು, ರಸ್ತೆ ನಿರ್ಮಿಸಿಕೊಡಲು ಇಲ್ಲಿನ ಜನರು ಮನವಿ ಮಾಡಿದ್ದಾರೆ.

ಮಳೆಗಾಲದಲ್ಲಿ ಅಂತ್ಯ ಸಂಸ್ಕಾರ ಮಾಡಲು ಜನರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಬಾರಿ ಮೃತದೇಹವನ್ನು ಅಂತ್ಯಸAಸ್ಕಾರ ಮಾಡುವಾಗ ಮಳೆ ಬಂದರೆ ಮೃತದೇಹವು ಅರೆಬರೆ ಸುಟ್ಟಿದ್ದು ಉಂಟು. ಮಳೆ ಬಿಟ್ಟಾಗ ಅದನ್ನು ಮತ್ತೆ ಸುಡುವ ಅನಿವಾರ್ಯತೆ ಇದೆ. ಆದ್ದರಿಂದ ಅಂತ್ಯ ಸಂಸ್ಕಾರಕ್ಕೆ ಶೆಡ್ ನಿರ್ಮಿಸಿಕೊಡಲು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






Discussion about this post