ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಎಸ್‌ಪಿ ಮಿಥುನ್ ಕುಮಾರ್ Shivamogga SP Mithun Kumar ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಧಾಳಿ ನಡೆಸಿದ್ದು, ಈ ವೇಳೆ ಜೈಲಿನೊಳಗೆ ದೊರೆತ ವಸ್ತುಗಳನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿಗಳ ನೇತೃತ್ವದ ತಂಡ ಇಂದು ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿದ ವೇಳೆ ಅಲ್ಲಿ ಕಂತೆಗಟ್ಟಲೆ ಬೀಡಿ, ಸಿಗರೇಟು, ನೂರಾರು ಬೆಂಕಿಪೊಟ್ಟಣಗಳು, ಲೈಟರ್‌ಗಳು ಪತ್ತೆಯಾಗಿವೆ.
ಅದರಲ್ಲೂ ಪ್ರಮುಖವಾಗಿ ಪ್ಲಾಸ್ಟಿಕ್ ಬಾಟಲನ್ನು ಮಾರ್ಪಡಿಸಿ ತಯಾರಿಸಿಕೊಂಡಿರುವ ತಂಬಾಕು ಸೇದುವ ಹುಕ್ಕಾಗಳು ದೊರೆತಿರುವುದು ಕಂಡು ಅಧಿಕಾರಿಗಳೇ ದಂಗಾಗುವಂತೆ ಮಾಡಿದೆ.
ಈ ಎಲ್ಲಾ ವಸ್ತುಗಳನ್ನು ಸೀಜ್ ಮಾಡಲಾಗಿದ್ದು ಕಾನೂನು ರೀತಿಯ ಕ್ರಮಕ್ಕೆ ಸೂಚಿಸಲಾಗಿದೆ. ಧಾಳಿ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಅಧೀಕ್ಷಕರು, ಪೊಲೀಸ್ ನಿರೀಕ್ಷಕರು, ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು.













Discussion about this post