ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಮುಂದುವರಿದ ಸಂಗೀತ ಕಾರ್ಯಕ್ರಮವು ಮೇ 15ರಿಂದ 23ರವರೆಗೆ ಪ್ರತಿದಿನ ಸಂಜೆ 5:30ರಿಂದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಶಾಸ್ತ್ರಿ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ 15ರ ಸಂಜೆ 5:30ಕ್ಕೆ ಮಂಗಳಾ ಅಶೋಕ್‌ರಿಂದ ವೀಣಾವಾದನ, 7:30ಕ್ಕೆ ಬೆಂಗಳೂರಿನ ಉಡುಪಿ ಅಭಿಜ್ಞಾರಾವ್‌ರಿಂದ ಹಾಡುಗಾರಿಕೆ ನಡೆಯಲಿದೆ ಎಂದರು.

Also read: ಜೆಡಿಎಸ್, ಕಾಂಗ್ರೆಸ್ ನಡುವಿನ ಒಳ ಒಪ್ಪಂದದಿಂದ ತನಗೆ ಸೋಲು: ಅಶೋಕ್ ನಾಯ್ಕ್
ಮೇ 18ರ ಸಂಜೆ 5:30ಕ್ಕೆ ಟಿ.ವಿ. ಶಿಲ್ಪಾ ಮತ್ತ ವೃಂದದವರಿಂದ ಹಾಡುಗಾರಿಕೆ, 6:30ಕ್ಕೆ ತ್ರಿಚ್ಯೂರ್ ಸಹೋದರರಾದ ಶ್ರೀಕೃಷ್ಣ ಮೋಹನ್ ಹಾಗೂ ರಾಮ್‌ಕುಮಾರ್ ಮೋಹನ್‌ರಿಂದ ಯುಗಳ ಹಾಡುಗಾರಿಕೆ. 19ರ ಸಂಜೆ 5::30ಕ್ಕೆ ಬೆಂಗಳೂರಿನ ನಯನ ಕಾರಂತ್ ಮತ್ತು ವೃಂದದವರಿಂದ ಹಾಡುಗಾರಿಕೆ, 6:30ಕ್ಕೆ ಹೊಸಳ್ಳಿಯ ರಾಜೇಶ್ವರಿ ನಾಗೇಂದ್ರ ಪ್ರಕಾಶ್‌ರಿಂದ ಹಾಡುಗಾರಿಕೆ ನಡೆಯಲಿದೆ ಎಂದರು.
ಮೇ 20ರ ಸಂಜೆ 6 ಗಂಟೆಗೆ ಶ್ರೀ ಪರಮಹಂಸ ಸದಾಶಿವ ಬ್ರಹ್ಮೇಂದ್ರರ ರಚನೆ `ಅದ್ವೈತ ಸದಾಶಿವ’ವನ್ನು ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ಮೇ 21ರ ಸಂಜೆ 5:30ಕ್ಕೆ ಮಹತಿ ಭಟ್ ಮತ್ತು ವೃಂದದವರಿಂದ ಹಾಡುಗಾರಿಕೆ, 6:30ಕ್ಕೆ ಮೈಸೂರಿನ ಆರ್.ಕೆ. ಪದ್ಮನಾಭ ಇವರಿಂದ ವೀಣಾ ವಾದನ ನಡೆಯಲಿದೆ ಎಂದರು.
ಮೇ 22ರ ಸಂಜೆ 5:30ಕ್ಕೆ ಬೆಂಗಳೂರಿನ ಚಿನ್ಮಯಿ ನಾಗೇಂದ್ರ ಮತ್ತು ಮಹತಿ ನಾಗೇಂದ್ರ ಮತ್ತು ವೃಂದದವರಿಂದ ಯುಗಳ ಹಾಡುಗಾರಿಕೆ 6:30ಕ್ಕೆ ಬೆಂಗಳೂರಿನ ಸಾಧ್ವಿನಿರಿಂದ ಹಾಡುಗಾರಿಕೆ. ಮೇ 23ರ ಸಂಜೆ 5:30ಕ್ಕೆ ಭವಾನಿ ಕಲ್ಕೂರು ಮತ್ತು ವೃಂದದವರಿಂದ ಹಾಡುಗಾರಿಕೆ, 6:30ಕ್ಕೆ ಚೆನ್ನೈನ ಶ್ರುತಿ ಎಸ್. ಭಟ್‌ರಿಂದ ಹಾಡುಗಾರಿಕೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಕಿಶೋರ್ ಶಿರ್ನಾಳಿ, ಶ್ರೀನಿವಾಸ, ಮೋಹನ ಶಾಸ್ತ್ರಿ, ಗೋಪಾಲ, ಆನಂದ, ಶ್ರೀರಾಮ ಉಪಸ್ಥಿತರಿದ್ದರು.


 
	    	


 Loading ...
 Loading ... 
							



 
                
Discussion about this post