ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂಬರುವ ಶಿವಮೊಗ್ಗದ ಕೋಟೆ ಶ್ರೀಮಾರಿಕಾಂಬಾ ಜಾತ್ರೆಗೆ #Shri Marikamba fair ಈ ಬಾರಿ ಇನ್ನಷ್ಟು ರಂಗು ನೀಡಲು ವಿಶೇಷ ಹಾಡೊಂದು ಬರಲಿದೆ.
ಹೌದು… ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾಗಿದ್ದು, ಬರುವ ಫೆಬ್ರವರಿ 24 ರಿಂದ 28 ರವರೆಗೆ 5 ದಿನಗಳ ಕಾಲ ಅತ್ಯಂತ ಅದ್ದೂರಿಯಾಗಿ ನಡೆಯಲಿರುವ ಜಾತ್ರೆಗೆ ‘ವಿಶೇಷ ಹಾಡೊಂದನ್ನು’ ಬಿಡುಗಡೆ ಮಾಡಲು ಸ್ಟೈ ಲ್ ಡ್ಯಾನ್ಸ್ ಕ್ರ್ಯೂ ಶಿವಮೊಗ್ಗ ತಂಡ ಸಜ್ಜಾಗಿದೆ.
ಫೆ.13 ಶುಕ್ರವಾರ ಸಂಜೆ 6ಕ್ಕೆ ಸ್ಟೈ ಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಈ ವಿಶೇಷ ಹಾಡು ಹೇ ಮಗ ಇದು ಶಿವಮೊಗ್ಗ ಎಂಬ ವೈರಲ್ ಹಾಡಿನ ತಂಡದಿAದ ತಯಾರಾಗಿದ್ದು, ಈ ಹಾಡಿನ ನಿರ್ಮಾಣದ ಕೆಲಸವನ್ನು ಸ್ಟೈ ಲ್ಲ್ ಡಾನ್ಸ್ ಕ್ರಿವ್ ತಂಡ ನಿರ್ವಹಿಸಿದೆ.
ಶಿವಮೊಗ್ಗ ಹಾಡೆಂದರೆ ನೆನಪಿಗೆ ಬರುವ ಹೇ ಮಗ ಇದು ಶಿವಮೊಗ್ಗ’ ಹಾಡಿನ ಗಾಯನದ ಮೂಲಕ ಶಿವಮೊಗ್ಗ ಜನರರನ್ನು ಕುಣಿದು ಕುಪ್ಪಳಿಸುವಂತೆ ಮಾಡಿರುವ ಎನ್. ಶಶಿಕುಮಾರ್ ಸಾಹಿತ್ಯವನ್ನು ರಚಿಸುವ ಮೂಲಕ ಗಾಯಕರು ಸಹ ಆಗಿದ್ದಾರೆಂಬುವುದು ಇಲ್ಲಿ ವಿಶೇಷ.
ಈ ಹಾಡಿಗೆ ಸಂಗೀತವನ್ನು ಪ್ರಿನ್ಸ್ ಜೋಸೆಫ್ ಅವರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















