ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಶ್ರೀನಗರ |
ಅಮರನಾಥ ಯಾತ್ರೆ ವೇಳೆ ಸಂಭವಿಸಿದ ಮೇಘ ಸ್ಫೋಟ (Amarnath cloudburst)ದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದ್ದ ಶಿವಮೊಗ್ಗದ 16 ಮಹಿಳೆಯರು ಸುರಕ್ಷಿತವಾಗಿದ್ದಾರೆ.
ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್ ಜೊತೆಯಲ್ಲಿ ಮಾತನಾಡಿ ಸ್ವತಃ ಸ್ಪಷ್ಟನೆ ನೀಡಿರುವ ಮಾಜಿ ಉಪಮೇಯರ್, ಬಿಜೆಪಿ ಮುಖಂಡೆ ಸುರೇಖಾ ಮುರಳೀಧರ್, ಶಿವಮೊಗ್ಗದಿಂದ ನಾನು ಸೇರಿದಂತೆ 16 ಮಹಿಳೆಯರು ಅಮರನಾಥ ಯಾತ್ರೆಗೆ ತೆರಳಿದ್ದು, ಆದರೆ, ನಿನ್ನೆ ಸಂಭವಿಸಿದ ಮೇಘ ಸ್ಫೋಟದಲ್ಲಿ ನಮಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ನಾವು ಸುರಕ್ಷಿತವಾಗಿದ್ದು, ಇಂದು ಮುಂಜಾನೆ ಹೆಲಿಪ್ಯಾಡ್‌ನಲ್ಲಿ ವಿಶ್ರಾಂತಿ ಪಡೆದು ಶ್ರೀನಗರದ ಕಡೆಗೆ ತೆರಳುತ್ತಿದ್ದೇವೆ. ಅಲ್ಲಿ ವಿಶ್ರಾಂತಿ ಪಡೆದು ಸೋಮವಾರದ ವೇಳೆಗೆ ಶಿವಮೊಗ್ಗಕ್ಕೆ ಹಿಂದಿರುಗಲಿದ್ದೇವೆ ಎಂದರು.

ನಮ್ಮ ತಂಡದಲ್ಲಿರುವ 16 ಮಹಿಳೆಯರು ಸುರಕ್ಷಿತವಾಗಿದ್ದು, ಯಾರೂ ಆತಂಕಪಡಬೇಕಿಲ್ಲ. ಎಲ್ಲಾ ಯೋಧರ ಹಾಗೂ ಅಧಿಕಾರಿಗಳ ಸಹಕಾರದಿಂದ, ಪಕ್ಷದ ಹಿರಿಯರು, ಕಾರ್ಯಕರ್ತರು ಹಾಗೂ ಜನರ ಆಶೀರ್ವಾದದಿಂದ ನಾವೆಲ್ಲಾ ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ.










Discussion about this post