ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2023-24ನೇ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ #SSLC Result ಇಂದು ಪ್ರಕಟಗೊಂಡಿದ್ದು, ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೇ 3ನೇ ಸ್ಥಾನ ಗಳಿಸುವ ಮೂಲಕ ಕಳೆದ ಹಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಉತ್ತಮ ಸಾಧನೆ ಮಾಡಿದೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೇ ಮೂರನೇ ಸ್ಥಾನ ಪಡೆದಿರುವ ಶಿವಮೊಗ್ಗ ಜಿಲ್ಲೆ ಶೇ. 88.67ರಷ್ಟು ಫಲಿತಾಂಶ ದಾಖಲಿಸಿದೆ. ಜಿಲ್ಲೆಯಲ್ಲಿ ಒಟ್ಟು 23,028 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 20,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

2022-23ನೇ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಶೇ.84.04ರಷ್ಟು ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 29ನೇ ಸ್ಥಾನದಲ್ಲಿತ್ತು.
Also read: SSLC ಫಲಿತಾಂಶ ಪ್ರಕಟ | ಈ ಜಿಲ್ಲೆ ಫಸ್ಟ್, ಈ ಜಿಲ್ಲೆ ಲಾಸ್ಟ್ | ಶಿವಮೊಗ್ಗ ಜಿಲ್ಲೆ ದಾಖಲೆಯ ಸ್ಥಾನ
ಹಿಂದಿನ ವರ್ಷಗಳ ಫಲಿತಾಂಶಕ್ಕೆ ಹೋಲಿಸಿದರೆ 2022-23ರಲ್ಲಿ ಭಾರೀ ಇಳಿಕೆ ಕಂಡಿದ್ದು, ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಶೇ.88.67ರಷ್ಟು ಫಲಿತಾಂಶ ದಾಖಲಿಸಿ, ಮೂರನೇ ಸ್ಥಾನಕ್ಕೆ ಜಿಗಿದಿರುವುದು ಸಂತೋಷ ಮೂಡಿಸಿದೆ.

2016-17ರಲ್ಲಿ ಶೇ.75.01, 2017-18ರಲ್ಲಿ ಶೇ.78.75 ರಷ್ಟು ಫಲಿತಾಂಶ ದಾಖಲಾಗಿದ್ದು, 2019ರಲ್ಲಿ ವ್ಯಾಪಿಸಿದ್ದ ಕರೋನಾ ಸೋಂಕಿನ ಕಾರಣದಿಂದಾಗಿ ಎಲ್ಲ ವಿದ್ಯಾರ್ಥಿಗಳಲ್ಲಿ ಉತ್ತೀರ್ಣ ಮಾಡಲಾಗಿತ್ತು. ಆ ವರ್ಷ ಶೇ.79.13ರಷ್ಟು ಫಲಿತಾಂಶ ದಾಖಲಾಗಿತ್ತು. ಆನಂತರ 2020ರಲ್ಲಿ ಪ್ರತಿವರ್ಷದಂತೆ ಪರೀಕ್ಷಾ ಪ್ರಕ್ರಿಯೆಗಳು ನಡೆದಿದ್ದು, ಶಿವಮೊಗ್ಗ ಜಿಲ್ಲೆ ಶೇ.81.75 ಫಲಿತಾಂಶ ದಾಖಲಿಸಿತ್ತು.

2016ರಿಂದ 2022ರವರೆಗಿನ ಫಲಿತಾಂಶ ಏರಿಕೆಯ ಹಾದಿಯಲ್ಲಿದ್ದರೂ 2022ಕ್ಕೆ ಹೋಲಿಸಿದರೆ 2023ರ ಈ ಬಾರಿ ಮೂರು ಸ್ಥಾನಗಳಲ್ಲಿ ಏಕಾಏಕಿ ಕುಸಿದಿದ್ದು ಯಾಕೆ ಎಂಬ ಪ್ರಶ್ನೆಯನ್ನು ಮೂಡಿಸಿತ್ತು.
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ 2016ರಿಂದ 2023ರವರೆಗೂ ಟಾಪ್ 10ರ ಒಳಗೆ ಸ್ಥಾನ ಪಡೆದ ದಾಖಲೆಗಳು ಇರಲಿಲ್ಲ. ಆದರೆ, ಈ ಬಾರಿ ಇದಕ್ಕೆ ವ್ಯತಿರಿಕ್ತವಾಗಿ 2023-24ನೇ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೇ 3ನೇ ಸ್ಥಾನ ಪಡೆದಿರುವುದು ಉತ್ತಮ ಬೆಳವಣಿಗೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post