ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಸಂಕಷ್ಟದ ಸಮಯದಲ್ಲೂ ಆತಂಕದಲ್ಲಿಯೇ ನಡೆದಿದ್ದ 2020-21ನೆಯ ಸಾಲಿನ ಎಸ್’ಎಸ್’ಎಲ್’ಸಿ ಪರೀಕ್ಷಾ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಜಿಲ್ಲೆಗೆ ಮೂರು ಎ ಗ್ರೇಡ್ ಫಲಿತಾಂಶ ದೊರೆತಿದೆ.
ಜಿಲ್ಲೆಯಲ್ಲಿ ಒಟ್ಟು 24000 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇದರಲ್ಲಿ 22053 ಸಂಖ್ಯೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 22053 ವಿದ್ಯಾರ್ಥಿಗಳು ಫ್ರೆಶ್ ವಿದ್ಯಾರ್ಥಿಗಳಾಗಿದ್ದರೆ ಉಳಿದವರು ರಿಪಿಟರ್ಸ್ ಆಗಿದ್ದಾರೆ.
ಎ ಗ್ರೇಡ್’ನಲ್ಲಿ 2482 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದರಲ್ಲಿ 1014 ಜನ ವಿದ್ಯಾರ್ಥಿಗಳು, 1468 ಜನ ವಿದ್ಯಾರ್ಥಿನಿಯರಾಗಿದ್ದಾರೆ.
22053 ವಿದ್ಯಾರ್ಥಿಗಳಲ್ಲಿ ಎ+ ಗ್ರೇಡ್’ನಲ್ಲಿ 1197 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿ ಗ್ರೇಡ್ ನಲ್ಲಿ 4963 ವಿದ್ಯಾರ್ಥಿಗಳು, 5085 ವಿದ್ಯಾರ್ಥಿನಿಯರು ಸೇರಿ ಒಟ್ಟು 10048 ಜನ ತೇರ್ಗಡೆಯಾದರೆ, ಸಿ ಗ್ರೇಡ್’ನಲ್ಲಿ 4807 ವಿದ್ಯಾರ್ಥಿಗಳು 3519 ಜನ ವಿದ್ಯಾರ್ಥಿನಿಯರು ಸಿ ಗ್ರೇಡ್’ನಲ್ಲಿ ಪಾಸ್ ಆಗಿದ್ದಾರೆ.
ನಗರದ ಗೋಪಾಳದ ರಾಮಕೃಷ್ಣ ಆಂಗ್ಲ ಪ್ರೌಢಶಾಲೆಯ ವಿನಯ್ ಜಿ. ಹೆಬ್ಬಾರ್, ಸಾಗರ ತಾಲೂಕಿನ ಎಂ.ಎಲ್. ಹಳ್ಳಿಯ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ ಕು.ಅಭೀಷ ಭಟ್, ತೀರ್ಥಹಳ್ಳಿಯ ಬಿ.ಎಸ್. ಶ್ರೀಶ, ಜಿಲ್ಲೆಯಲ್ಲಿ 625/625 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post