ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ಶಿವಮೊಗ್ಗದಲ್ಲಿ ಇಂದು ವಿಧಾತ್ರಿ ಭವನ ಹಾಲ್ ನಲ್ಲಿ ಅಸಂಘಟಿತ ಕಾರ್ಮಿಕರ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯಾಧ್ಯಕ್ಷ ಕುಪೇಂದ್ರಪ್ಪ ಆಯನೂರು ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಪದಾಧಿಕಾರಿಗಳಿಗೆ ಗುರುತಿನಿ ಚೀಟಿ ಹಾಗೂ ಎಲ್ಲಾ ಜಿಲ್ಲೆಯವರಿಗೆ ನೇಮಕಾತಿ ಪತ್ರ ಮತ್ತು ಜಿಲ್ಲೆಯ ಅಧ್ಯಕ್ಷರಿಗೆ ಮತ್ತು ಪದಾದಿಕಾರಿಗಳಿಗೆ ಗುರುತಿನ ಕಾರ್ಡುಗಳನ್ನು ವಿತರಿಸಲಾಯಿತು
ಈ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರುಗಳಾದ ಪ್ರದೀಪ್ ಹೊನ್ನಪ್ಪ, ಪದ್ಮಾ ನವೀನ್, ಸಂದ್ಯಾ ಕುಮಾರ್ ಹಾಗೂ ರಾಜ್ಯದ ಪದಾದಿಕಾರಿಗಳು ಮತ್ತು ಶಿವಮೊಗ್ಗ ನಗರ ಅಧ್ಯಕ್ಷರಾದ ಸುರೇಖಾ ಪಾಲಕ್ಷಪ್ಪ ಮತ್ತು ಎಲ್ಲಾ ಜಿಲ್ಲೆಯ ಅಧ್ಯಕ್ಷರು ಮತ್ತು ಪದಾದಿಕಾರಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post