ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ನೆಹರು ಒಳಾಂಗಣ ಕ್ರೀಡಾಂಗಣವನ್ನು ಶಿವಮೊಗ್ಗ ಓಪನ್ ನಾಲ್ಕನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ನೀಡಬೇಕೆಂದು ರಾಜ್ಯ ಕರಾಟೆ ಅಸೋಸಿಯೇಷನ್ ಮಾಡಿದ ಮನವಿಗೆ ಕ್ರೀಡಾ ಸಚಿವ ನಾಗೇಂದ್ರ ಸ್ಪಂದಿಸಿದ್ದು, ಸಚಿವರ ಈ ಕ್ರಮಕ್ಕೆ ಕರಾಟೆ ಅಸೋಸಿಯೇಷನ್ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದೆ.
ಕಳೆದ ಒಂದು ವರ್ಷದಿಂದ ನೆಹರು ಒಳಾಂಗಣ ಕ್ರೀಡಾಂಗಣವನ್ನು ಇತರ ಚಟುವಟಿಕೆಗಳಿಗೆ ನೀಡುವುದಿಲ್ಲ ಸಿಂಥೆಟಿಕ ಹಾಕಲಾಗಿದೆ ಹಾಗೂ ಬೈಲಾದ ನೆಪವನ್ನು ನೀಡುತ್ತಿದ್ದ ಅಧಿಕಾರಿಗಳಿಗೆ ಕ್ರೀಡಾ ಸಚಿವ ಬಿ ನಾಗೇಂದ್ರ ಕ್ರೀಡಾಂಗಣ ಇರುವುದು ಕ್ರೀಡಾಪಟುಗಳಿಗಾಗಿ ಕ್ರೀಡಾಂಗಣದಲ್ಲಿ ದೈಹಿಕ ವ್ಯಾಯಾಮಕ್ಕಾಗಿ ಬರುವವರಿಗಿಂತ ಕ್ರೀಡಾಪಟುಗಳಿಗೆ ಮೊದಲ ಆದ್ಯತೆ ಸಿಗಬೇಕು ಹಾಗೂ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ರಾಜ್ಯದಲ್ಲಿ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದು, ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸೋಸಿಯೇಷನ್ ಆಗಿದೆ. ಈ ಆದ್ಯತೆಯನ್ನು ಪರಿಗಣಿಸಿ ಅಸೋಸಿಯೇಷನ್ ಆಗಸ್ಟ್ 5 ಮತ್ತು 6 ರಂದು ಶಿವಮೊಗ್ಗದಲ್ಲಿ ನಡೆಸಲು ಹೊರಟಿರುವ ಶಿವಮೊಗ್ಗ ಓಪನ್ ನಾಲ್ಕನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಇಲಾಖೆ ಒಳಾಂಗಣ ಕ್ರೀಡಾಂಗಣವನ್ನು ನೀಡಬೇಕೆಂದು ಇಲಾಖೆಗೆ ಸಚಿವ ಬಿ ನಾಗೇಂದ್ರ ನಿರ್ದೇಶನವನ್ನು ನೀಡಿದರು.
ಒಳಾಂಗಣ ಕ್ರೀಡಾಂಗಣ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಹಾಗೂ ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸೋಸಿಯೇಷನ್ ಗೆ ಸಿಗುವ ರೀತಿಯಲ್ಲಿ ಕ್ರಮ ಜರುಗಿಸಿದ ಸಚಿವರ ಕಾರ್ಯವೈಕರಿಯನ್ನು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ ರಾಜ್ಯಾಧ್ಯಕ್ಷ ಶಿವಮೊಗ್ಗ ವಿನೋದ್ ಶ್ಲಾಘಿಸಿ ಅಭಿನಂದಿಸಿದ್ದಾರೆ.
Also read: ಕೆಸರು ಗದ್ದೆಯಾದ ರಸ್ತೆ: ದುರಸ್ತಿಗೆ ಗ್ರಾಮಸ್ಥರ ಆಗ್ರಹ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















