ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಎಬಿವಿಪಿ ಆಯೋಜಿಸಿದ್ದ ವಿವೇಕಾ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಜಾಗಿಯ ಸಾಮೂಹಿಕ ಗಾಯನ ಸ್ಪರ್ಧೆಯಲ್ಲಿ ಕಲಾ ಕಾಲೇಜಿನ ವಿದ್ಯಾರ್ಥಿಗಳಾದ ಮುಸ್ಕಾನ್ ಬಿ.ಆರ್., ಭರತ್ ಬಿ., ಹಾಲೇಶ್ ಆರ್., ಪ್ರಣತಿ, ವಿಷ್ಣುಬಾಬು, ಅಂಕಿತಾ ಬಿ.ಪಿ., ಪ್ರತಿಭಾ ಅವರು ದ್ವಿತೀಯ ಬಹುಮಾನ ಪಡೆದರೆ, ರಸಪ್ರಶ್ನೆ ಸ್ಪರ್ಧೆಯಲ್ಲಿ ಮೈತ್ರಿ ಜಿ.ಎಸ್., ನಂದಿತಾ ಎಲ್.ಜೈನ್ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಗೀತಾ ಎಂ., ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ.
ಹಾಗೆಯೇ ಅಂತರ ವಿವಿ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮಧುಶ್ರೀ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Also read: ಇಡಿಯಿಂದ ಕೇಜ್ರಿವಾಲ್ ಬಂಧನ ಸಾಧ್ಯತೆ! ದೆಹಲಿ ಸಿಎಂ ನಿವಾಸ ಸಂಪರ್ಕ ರಸ್ತೆಗಳು ಬಂದ್?
ಇಂದು ಸಹ್ಯಾದ್ರಿ ಕಲಾ ಕಾಲೇಜಿನ ಆವರಣದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದ, ಕಾಲೇಜಿನ ಪ್ರಾಂಶುಪಾಲ ಡಾ. ಸೈಯ್ಯದ್ ಸನಾವುಲ್ಲಾ, ಸಾಂಸ್ಕೃತಿಕ ಹಾಗೂ ಕ್ರೀಡೆ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಮತ್ತು ಭೌತಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಅಲ್ಲದೇ ಶೈಕ್ಷಣಿಕ ಬೆಳವಣಿಗೆಗೆ ಪ್ರಚೋದನೆಯಾಗುತ್ತದೆ. ನಾಯಕತ್ವ ಗುಣ, ಸಾಮರಸ್ಯ, ಮನುಷ್ಯ ಪ್ರೇಮ ಮುಂತಾದ ಒಳ್ಳೆಯ ಭಾವನೆಗಳು ಬೆಳೆಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್ ಪ್ರಾಧ್ಯಪಕರುಗಳಾದ ಡಾ.ಟಿ.ಅವಿನಾಶ್, ಡಾ.ಸಿರಾಜ್ ಅಹಮ್ಮದ್, ಡಾ.ಹಾಲಮ್ಮ, ಡಾ.ಪ್ರಕಾಶ್ ಮರ್‍ಗನಳ್ಳಿ, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಪ್ರತಿಮಾ ಎನ್., ಗೋವಿಂದರಾಜ್ ಹಾಗೂ ಬಹುಮಾನ ಪಡೆದ ವಿದ್ಯಾರ್ಥಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















