ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್‌ನಿಂದ ದಸರಾ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ದಸರಾ ವಚನಗಾಯನ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ್ದು, ಶೇ. 80ಅಂಕ ಪಡೆಯುವುದರೊಂದಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಪ್ರತೀಕ್ಷಾ ಜೋಯ್ಸ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಶೇ. 75 ಅಂಕಗಳನ್ನು ಯೂಟ್ಯೂಬ್ ವೀಕ್ಷಣೆ, ಲೈಕ್ ಮತ್ತು ಸಬ್‌ಸ್ಟೈಲ್ ಆಧಾರದ ಮೇಲೆ ಮತ್ತು ಶೇ. 25 ಅಂಕಗಳನ್ನು ವಚನ ಗಾಯನದರಾಗ, ತಾಳ ಮತ್ತು ಶ್ರುತಿಗಳ ಆಧಾರದ ಮೇಲೆ ನೀಡಲಾಗಿದ್ದು, ಶೇ.50 ಅಂಕ ಪಡೆದ ಬೆಳಗಾವಿ ಜಿಲ್ಲೆಯ ಗೋಕಾಕ್‌ನ ವಿದ್ಯಾ ಸೋಮಶೇಖರ್ ಮಗದುಮ್ಮ- ದ್ವಿತೀಯ ಹಾಗೂ ಶೇ. 45 ಅಂಕ ಪಡೆದ ಚಾಮರಾಜನಗರ ಜಿಲ್ಲೆ ಆಲೂರು ಹೊಮ್ಮದ ಎಚ್.ಬಿ. ಶರಣ್ಯ – ತೃತೀಯ ಸ್ಥಾನ ಪಡೆದಿದ್ದಾರೆ.
ಯೂಟ್ಯೂಬ್ ಅಂಕಗಳನ್ನು ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಮತ್ತು ವಚನ ಗಾಯನದ ರಾಗ, ತಾಳ ಮತ್ತು ಶ್ರುತಿಗಳ ಆಧಾರದ ಮೇಲೆ ಅಂಕಗಳನ್ನು ಆಕಾಶವಾಣಿ ಕಲಾವಿದೆ ಶೈಲ ಸಿದ್ದರಾಮಪ್ಪ ನೀಡಿದ್ದು, ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುವುದು ಬಹುಮಾನ ಎ೦ದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post