ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ದುಶ್ಚಟ, ಅಪರಾಧ ಮತ್ತು ಕಾನೂನು ವಿರೋಧಿ ಕೃತ್ಯಗಳಿಂದ ದೂರವಿರಬೇಕು ಎಂದು ಪೊಲೀಸ್ ಉಪ ಅಧೀಕ್ಷಕ ಪ್ರಶಾಂತ್ ಮುನ್ನೋಳಿ ಹೇಳಿದರು.
ಸಹ್ಯಾದ್ರಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಮಾತನಾಡಿದರು.
ಮದ್ಯಾಹ್ನದ ಉಪನ್ಯಾಸ ಕಾರ್ಯಕ್ರಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಇವರು ಶಿಬಿರಾರ್ಥಿಗಳಿಗೆ ದುಶ್ಚಟಗಳಿಂದ ಆಗುವ ಸಮಸ್ಯೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಂಜೆಯ ಕಾರ್ಯಕ್ರಮದಲ್ಲಿ ಕುವೆಂಪು ವಿ. ವಿ. ಸಿಂಡಿಕೇಟ್ ಸದಸ್ಯ ರಮೇಶ್ ಬಾಬು ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಾಹಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ವಿವರಿಸಿದರು.
ಎಚ್ಚರಿಕೆ ದಿನಪತ್ರಿಕೆ ಸಂಪಾದಕ ವೈ. ಕೆ. ಸೂರ್ಯನಾರಾಯಣ ಮಾತನಾಡಿ, ಇತ್ತೀಚೆಗೆ ಪದ್ಮ ಪ್ರಶಸ್ತಿ ಪಡೆದವರ ಉದಾಹರಣೆಗಳೊಂದಿಗೆ ಸೇವೆಯು ನಿಸ್ವಾರ್ಥ ಮತ್ತು ಅಪೇಕ್ಷರಹಿತವಾಗಿರಬೇಕು. ದಿನಪತ್ರಿಕೆಗಳನ್ನು ನಿರಂತರವಾಗಿ ಓದುವುದರ ಮೂಲಕ ಸಂವಹನ ಕೌಶಲ ಅಭಿವೃದ್ಧಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ನಾಗರಾಜ ಪರಿಸರ ಅಧ್ಯಕ್ಷತೆ ವಹಿಸಿದ್ದರು. ೧೫೦ ಸ್ವಯಂ ಸೇವಕರು ಭಾಗವಹಿಸಿರುವ ಈ ಶಿಬಿರದಲ್ಲಿ ಡಾ. ಪ್ರಕಾಶ್ ಮರ್ಗನಳ್ಳಿ, ಡಾ. ಹಾಲಮ್ಮ, ಡಾ. ಶುಭ ಮರವಂತೆ, ಡಾ. ಹಾ. ಮಾ. ನಾಗಾರ್ಜುನ, ಡಾ. ಗಣೇಶ್ ಆರ್. ಕೆಂಚನಾಲ್, ಡಾ. ಪರಶುರಾಂ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post