ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಡಿಕೆಲ ಸುಬ್ಬಯ್ಯ ಟ್ರಸ್ಟ್ ಅಧ್ಯಕ್ಷ, ಮ್ಯಾಕ್ಸ್ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ಟಿ. ಸುಬ್ಬರಾಮಯ್ಯ #T Subbaramaiah ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ #Minister Madhu Bangarappa ಸಂತಾಪ ಕೋರಿದ್ದಾರೆ.
ಈ ಕುರಿತಂತೆ ಸಂತಾಪ ಸೂಚಕ ಸಂದೇಶ ನೀಡಿರುವ ಸಚಿವರು, ಸುಬ್ಬರಾಮಯ್ಯ ಅವರು ಶಿವಮೊಗ್ಗ ವೈದ್ಯಕೀಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಗರದ ಉದ್ಯಮ ವಲಯಕ್ಕೆ ಗಣಿನಿಯ ಸೇವೆ ಸಲ್ಲಿಸಿದ್ದು, ಇವರ ಅಗಲಿಕೆಯಿಂದ ಶಿವಮೊಗ್ಗ ನಗರದಲ್ಲಿ ಒಬ್ಬ ಅತ್ಯುತ್ತಮ ಉದ್ಯಮಿಯನ್ನು ಕಳೆದುಕೊಂಡು ಉದ್ಯಮ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
Also read: ಬೆಳಗಾವಿ | ತಹಸೀಲ್ದಾರ್ ಕಚೇರಿಯಲ್ಲಿ ಸಹಾಯಕ ಸಿಬ್ಬಂದಿ ಆತ್ಮಹತ್ಯೆ
ಅವರ ಕುಟುಂಬ ವರ್ಗಕ್ಕೆ ಹಾಗೂ ಇವರ ಸಮೂಹ ಸಂಸ್ಥೆಗಳ ಸಿಬ್ಬಂದಿ ವರ್ಗಕ್ಕೆ ಇವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post