ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯೆ ಮತ್ತು ಕ್ರೀಡೆ ಇವೆರಡರ ಕಠಿಣ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ರಾಷ್ಟ್ರೀಯ ಹಾಗೂ ಪ್ರೋ ಕಬಡ್ಡಿ ಕೀಡ್ರಾಪಟು ಗಗನ್ ಗೌಡ ಹೇಳಿದರು.
ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಕ್ರೀಡಾ ದಿನವನ್ನು ಆಯೋಜಿಲಾಗಿತ್ತು. ವಿದ್ಯಾರ್ಥಿಗಳಿಂದ ಪಥಸಂಚಲನದ ಮೂಲಕ ಅಥಿತಿಗಳಿಗೆ ಗೌರವವನ್ನು ಸಲ್ಲಿಸಲಾಯಿತು. ಮುಖ್ಯ ಅತಿಥಿ ಗಗನ್ ಗೌಡ ಇವರು ಕ್ರೀಡಾ ಜ್ಯೋತಿಯನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಿಇಎಸ್ ಟ್ರಸ್ಟ್ ಕುಲಸಚಿವರು ಡಾ.ನಾಗರಾಜ್ ಮಾತನಾಡಿ, ವಿದ್ಯಾರ್ಥಿ ಜೀವನವೆಂದರೆ ಕೇವಲ ಪುಸ್ತಕಗಳೊಂದಿಗೆ ಸಾಗುವ ಪಯಣವಲ್ಲ ದೈಹಿಕ ಮತ್ತು ಮಾನಸಿಕ ಸದೃಢತೆಯೊಂದಿಗೆ ವ್ಯಕ್ತಿತ್ವ ವಿಕಸನಗೊಳ್ಳುವ ಕಾಲ ಹಾಗಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸದೃಢರಾಗಿ ಎಂದರು.
ದೈಹಿಕ ಶಿಕ್ಷಕ ಡಾ.ಸೆಂಥಿಲ್ ಮಕ್ಕಳಿಗೆ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿ, ಮಕ್ಕಳಿಗೆ ಪ್ರಾಮಾಣಿಕವಾಗಿ ಆಟೋಟಗಳಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
5ನೇ ತರಗತಿ ವಿದ್ಯಾರ್ಥಿಗಳು ಕ್ರೀಡಾ ನೃತ್ಯ, ಕರಾಟೆ ಪ್ರದರ್ಶಿಸಿದರು. ಮಕ್ಕಳಿಗೆ ಓಟದ ಸ್ಪರ್ಧೆ, ಗುಂಡು ಎಸೆತ , ಫುಟ್ಬಾಲ್ ಮತ್ತು ವಾಲಿಬಾಲ್, ಉದ್ದ ಜಿಗಿತ ಆಟೋಟಗಳನ್ನು ಆಯೋಜಿಸಲಾಗಿತ್ತು. ಹಾಗೂ ಮಕ್ಕಳನ್ನು ವಿವಿಧ ಎಂಟರ್ ಹೌಸ್ ಗುಂಪುಗಳಾಗಿ ವಿಂಗಡಿಸಿ ಒಳಾಂಗಣ ಹೊರಾಂಗಣ ಕ್ರೀಡೆಗಳನ್ನು ಶಾಲೆಯ ಎಲ್ಲಾ ದೈಹಿಕ ಶಿಕ್ಷಕರ ನೇತೃತ್ವದಲ್ಲಿ ಆಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅತಿಥಿಗಳನ್ನು ಕುಲ್ಸುಮ್ ಹಾಗೂ ಆನ್ಯ ಸ್ವಾಗತಿಸಿದರು, ಕಾರ್ಯಕ್ರಮದ ನಿರೂಪಣೆ ಶ್ರೀಜಾ ಹಾಗೂ ನೇಹ ಎಂಟನೇ ತರಗತಿಯವರು ನೆರವೇರಿಸಿಕೊಟ್ಟರು
ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಶಿಕ್ಷಕೇತರ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















