ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬದ ನಿಮಿತ್ತ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಲಸಿಕಾ ಅಭಿಯಾನ ಯಶಸ್ವಿಯಾಗಿದೆ ಎಂದು ಜಿಲ್ಲಾ ಲಸಿಕಾ ಅಭಿಯಾನ ಪ್ರಮುಖ್ ಎಸ್. ದತ್ತಾತ್ರಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಿನ್ನೆ ಲಸಿಕಾ ಅಭಿಯಾನದ ನಿಮಿತ್ತ 1 ಲಕ್ಷ ಲಸಿಕೆ ವಿತರಿಸುವ ಗುರಿಯನ್ನು ಹೊಂದಲಾಗಿತ್ತು. ಎಲ್ಲರ ಪರಿಶ್ರಮದಿಂದ ಆ ಗುರಿಯನ್ನು ದಾಟಿ, ಒಂದೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಲಸಿಕೆಯನ್ನು ವಿತರಿಸುವ ಮೂಲಕ ಶಿವಮೊಗ್ಗ ದಾಖಲೆ ನಿರ್ಮಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಿನ್ನೆಯ ಬೃಹತ್ ಲಸಿಕಾ ಅಭಿಯಾನದ ಲಸಿಕೆ ವಿತರಣೆಯ ಗುರಿಯನ್ನು ತಲುಪುವುದರಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆಯುವ ಮೂಲಕ ಶಿವಮೊಗ್ಗ ಹೊಸ ದಾಖಲೆ ಸೃಷ್ಟಿಸಿದೆ. ಈ ದಾಖಲೆಗೆ ಕಾರಣರಾದಂತಹ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಆರೋಗ್ಯಾಧಿಕಾರಿ ಡಿಹೆಚ್‌ಒ ಡಾ. ರಾಜೇಶ್ ಸುರಗಿಹಳ್ಳಿ, ಆರ್‌ಸಿಎಚ್‌ಒ ಡಾ. ನಾಗರಾಜ್ ನಾಯಕ್ ಹಾಗೂ ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ದಾದಿಯರು, ಕಂಪ್ಯೂಟರ್ ಆಪರೇಟರ್ಸ್‌ಗಳಿಗೆ, ನಮ್ಮ ಲಸಿಕಾ ಅಭಿಯಾನದ ಪ್ರಮುಖರಿಗೆ ಹಾಗೂ ಎಲ್ಲಾ ತಾಲೂಕು ತಂಡದ ಕಾರ್ಯಕರ್ತರಿಗೆ, ಜಿಲ್ಲೆಯ ಸಮಸ್ತ ಜನತೆಗೆ ಎಸ್. ದತ್ತಾತ್ರಿ ಧನ್ಯವಾದ ಸಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post