ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಂಜಪ್ಪ ಲೈಫ್‍ಕೇರ್ ಆಸ್ಪತ್ರೆಯಲ್ಲಿ ಅಪರೂಪದ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಸುಧಾರಿತ ವಿಧಾನದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯೆ ಡಾ. ನಿಶಿತ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಸ್ತ್ರಚಿಕಿತ್ಸೆಯ ಪೂರ್ಣವಿವರವನ್ನು ಪ್ರಾತ್ಯಕ್ಷತೆಯ ಮೂಲಕ ವಿವರಿಸಿ, ಇದೊಂದು ಅಪರೂಪದ ಮತ್ತು ಮಲೆನಾಡು ಭಾಗದಲ್ಲಿ ಮೊದಲ ಬಾರಿಗೆ ನಂಜಪ್ಪ ಆಸ್ಪತ್ರೆಯಿಂದ ಮಾಡಿರುವ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ ಎಂದರು.

ಈ ಮೆದುಳಿನ ಚಿಕಿತ್ಸೆಯನ್ನು ಫ್ಲೋ ಡೈವರ್ಟರ್ ಬಳಸಿ ಪ್ರಮುಖ ರಕ್ತನಾಳ ಪುನರ್ ನಿರ್ಮಾಣ ಮಾಡಬೇಕಾಯಿತು. ಅರವಳಿಕೆ ತಜ್ಞರ ಸಹಕಾರದೊಂದಿಗೆ ನಮ್ಮ ತಂಡವು ಮೆದುಳಿನ ಪ್ರಮುಖ ರಕ್ತನಾಳ ತಲುಪಲು ತೊಡೆಯಲ್ಲಿ ಸಣ್ಣ ಸೂಜಿಗಾತ್ರದ ತೆಳುವಾದ ಟ್ಯೂಬನ್ನು ಬಳಸಿ, ಅದನ್ನು ಮೆದುಳಿಗೆ ತಲುಪಿಸಿ ಅಲ್ಲಿ ಊತವಿರುವ ರಕ್ತನಾಳಕ್ಕೆ ರಕ್ತ ಸಂಚರಿಸುವುದನ್ನು ನಿಲ್ಲಿಸಲಾಯಿತು. ಇದೊಂದು ಚಾಲೆಜಿಂಗ್ ಶಸ್ತ್ರಚಿಕಿತ್ಸೆಯಾಗಿತ್ತು ಎಂದರು.

ಸಾಮಾನ್ಯವಾಗಿ ಈ ರೀತಿಯ ಶಸ್ತ್ರಚಿಕಿತ್ಸೆಗೆ ಏಳೆಂಟು ಲಕ್ಷ ರೂ. ಖರ್ಚಾಗುತ್ತದೆ. ಬೆಂಗಳೂರು, ಬೆಳಗಾವಿಯಂತಹ ನಗರದಲ್ಲಿ ಮಾತ್ರ ಈ ಸೌಲಭ್ಯವಿತ್ತು. ಮಲೆನಾಡು ಭಾಗದಲ್ಲಿ ಇರಲಿಲ್ಲ. ನಾವು ಇದನ್ನು ಮಾಡಿದ್ದೇವೆ ಇಂತಹ ಕಾಯಿಲೆಗೂ ಸರ್ಕಾರದಿಂದ ಸಹಾಯಧನದ ಅನುಮತಿ ಬೇಕಾಗುತ್ತದೆ. ಮತ್ತು ಎಲ್ಲಾ ರೀತಿಯ ಆರೋಗ್ಯವಿಮೆಯ ಪಟ್ಟಿಗೆ ಈ ಕಾಯಿಲೆಯನ್ನು ಕೂಡ ಸೇರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಹಾಗಾದಾಗ ಬಿಪಿಎಲ್ ಕಾರ್ಡ್ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯದ ಸಹಾಯ ಪಡೆಯಲು ಅನುಕೂಲವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅರವಳಿಕೆ ತಜ್ಞ ಡಾ. ಪ್ರವೀಣ್ ಕುಮಾರ್, ಪಿಆರ್‍ಓ ತ್ರಿವೇಣಿಶೆಟ್ಟಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post