ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರ ರೈತರು, ಬಡವರು, ಕಾರ್ಮಿಕರು, ದುರ್ಬಲ ವರ್ಗದ ಅಭಿವೃದ್ಧಿಪರವಾಗಿದೆ ಎಂದು ಹೇಳಲಾಗಿದೆ ಹಾಗೂ ಇದು ಸತ್ಯವೇ ಸರಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 25 ವರ್ಷಗಳ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥವನ್ನು ಯಶಸ್ವಿಯಾಗಿ ಕ್ರಮಿಸುವ ವಿಶ್ವಾಸವನ್ನು ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ವ್ಯಕ್ತಪಡಿಸಿದ್ದಾರೆ.
ಬಜೆಟ್ ಮಂಡನೆ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ರಾಜ್ಯಪಾಲರ ಭಾಷಣ ನಂತರ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ ಅವರು, ರಾಜ್ಯಪಾಲರು ಹೇಳಿರುವ ಅಭಿವೃದ್ಧಿ ಕಾರ್ಯಗಳೆಲ್ಲ ಸತ್ಯವೇ, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ಜನಪರ ಸರ್ಕಾರ ಎಂದು ರಾಜ್ಯದ ಉನ್ನತ ಸ್ಥಾನದಲ್ಲಿರುವ ರಾಜ್ಯಪಾಲರಿಂದ ನಮಗೆ ಶಭಾಷ್‌ಗಿರಿ ಸಿಕ್ಕಿದೆ.
ರಾಜ್ಯಪಾಲರು ಉಲ್ಲೇಖಿಸಿದಂತೆ, ನಮ್ಮ ಶಿವಮೊಗ್ಗದ ಅಭಿವೃದ್ಧಿ ಕಾರ್ಯಗಳು ಇನ್ನಷು ಉತ್ತೇಜಿಸಲು ಹಾಗೂ ಹೆಚ್ಚಿಸಲು ಫೆ. 27 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಶಿವಮೊಗ್ಗ ಏರ್‌ರ್ಪೋಟ್ ಉದ್ಘಾಟನೆ ಆಗಲಿದೆ. ಇದರಿಂದ ಇಡಿ ಮಲ್ನಾಡು ಭಾಗದ ಜನರ ಚಲನವಲನಕ್ಕೆ ಅನುಕೂಲವಾಗಲಿದೆ ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಾರಿ ಅನುಕೂಲವಾಗಲಿದೆ.
ಇದೇ ರೀತಿ ಇನ್ನು ಮುಂದುವರೆದು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವ ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮಾರ್ಗದರ್ಶನದಂತೆ ಹಾಗೂ ಎಲ್ಲಾ ನಮ್ಮ ಹಿರಿಯ ಬಿಜೆಪಿ ನಾಯಕರ ಮಾರ್ಗದರ್ಶನದಂತೆ ಮುಂದುವರಿಯುತ್ತೇನೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post