ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಷೇಧಿತ ಪಿಎಫ್`ಐ ಹಾಗೂ ಸಿಎಫ್’ಐ ಸಂಘಟನೆಗಳು ಪರವಾಗಿ ಶಿರಾಳಕೊಪ್ಪದಲ್ಲಿ ಗೋಡೆ ಬರಹ ಬರೆದ ಘಟನೆ ಕುರಿತಂತೆ ಸು ಮೋಟೋ ಪ್ರಕರಣ ದಾಖಲಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಪಿಎಫ್’ಐ ಹಾಗೂ ಸಿಎಫ್’ಐ ಸಂಘಟನೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ ಎಂದರು.
ದೇಶ ವಿರೋಧಿಗಳ ವಿರುದ್ಧ ಮೋದಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇವರನ್ನೆಲ್ಲಾ ಮಟ್ಟ ಹಾಕುತ್ತೇವೆ. ಬಹಳ ವರ್ಷಗಳಿಂದಲೂ ದೇಶ ವಿರೋಧಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದರ ಪ್ರತಿಫಲವೇ ಶಿರಾಳಕೊಪ್ಪದಲ್ಲಿ ಬರೆದಂತಹ ಗೋಡೆ ಬರಹದ ಪ್ರಕರಣ ಎಂದರು.
ಈ ಸಂಘಟನೆಗಳು ಬ್ಯಾನ್ ಆಗಿದ್ದರೂ ಇನ್ನೂ ಬಹಳಷ್ಟು ಮಂದಿ ಇದೇ ಮಾನಸಿಕತೆಯಲ್ಲಿದ್ದಾರೆ. ಇಂತಹವರನ್ನು ಕಾನೂನು ರೀತಿಯಲ್ಲಿ ಮಟ್ಟ ಹಾಕುತ್ತೇವೆ. ಇದರೊಂದಿಗೆ ಮುಸ್ಲಿಂ ಸಮಾಜದ ಮುಖಂಡರು ದೇಶದ್ರೋಹಿಗಳ ಸದ್ದಡಗಿಸುವ ಕೆಲಸ ಮಾಡಬೇಕಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post