ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಭಿವೃದ್ಧಿಯ ಹರಿಕಾರ, ಹಿಂದುತ್ವವಾದಿ, ಹಿಂದುಳಿದ ವರ್ಗಗಳ ನಾಯಕರಾದ ಕೆ.ಎಸ್. ಈಶ್ವರಪ್ಪ #K S Eshwarappa ಅವರನ್ನು ಬೆಂಬಲಿಸುವಂತೆ ಶಿವಮೊಗ್ಗ ಗ್ರಾಮಾಂತರ ವಿಭಾಗದ ರಾಷ್ಟ್ರಭಕ್ತ ಬಳಗದ ಹೊಳೆಹೊನ್ನೂರು, ಅರಬಿಳಚಿ ಹಾಗೂ ಸುತ್ತಮುತ್ತಲ ಗ್ರಾಮದ ಕಾರ್ಯಕರ್ತರು ಮನವಿ ಮಾಡಿಕೊಂಡರು.
ಬಿಜೆಪಿ ಪಕ್ಷದಲ್ಲಿ ಅನ್ಯಾಯವಾಗಿರುವ ವಿರುದ್ಧ ಕೆ.ಎಸ್.ಈಶ್ವರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಎಲ್ಲಾ ಜಾತಿಯವರನ್ನು ಪ್ರೀತಿಸುವ ಈಶ್ವರಪ್ಪನವರು ಹಿಂದುತ್ವವನ್ನು ಪ್ರತಿಪಾದಿಸಿದವರು ಎಂದು ರಾಷ್ಟ್ರಭಕ್ತ ಬಳಗದ ಎಲ್.ಆರ್.ಮಂಜುನಾಥ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಶ್ವರಪ್ಪರವರ ಪುತ್ರ ಕೆ.ಇ.ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೇಟ್ ಕೊಡಿಸಿ ಗೆಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆ.ಎಸ್.ಈಶ್ವರಪ್ಪನವರಿಗೆ ಭರವಸೆ ನೀಡಿ, ಅನ್ಯಾಯ ಮಾಡಿದ್ದಾರೆ. ಅದರಂತೆ ಹಿಂದುತ್ವವಾದಿಗಳಾದ ಸಿ.ಟಿ.ರವಿ, ಪ್ರತಾಪಸಿಂಹ, ನಳಿನಕುಮಾರ್ ಕಟೀಲ್, ಅನಂತಕುಮಾರ್ ಹೆಗ್ಡೆ ಇವರಿಗೆ ಯಡಿಯೂರಪ್ಪನವರು ಟಿಕೇಟ್ ದೊರೆಯದಹಾಗೆ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಿದರು.
Also read: ಶಿವಮೊಗ್ಗ | ಗೀತಾ ಗೆಲುವಿನ ಮೂಲಕ ಹೊಸ ಇತಿಹಾಸ ದಾಖಲಾಗಲಿದೆ: ಚೆಲುವರಾಯಸ್ವಾಮಿ
ಕುಟುಂಬ ರಾಜಕಾರಣವನ್ನು ಮತದಾರರು ತಿರಸ್ಕರಿಸಿ ಹಿಂದುತ್ವವಾದಿ ಹಾಗೂ ಪಕ್ಷ ನಿಷ್ಟೆಯುಳ್ಳ ಕೆ.ಎಸ್.ಈಶ್ವರಪ್ಪನವರಿಗೆ ಈ ಬಾರಿ ಕ್ಷೇತ್ರದ ಜನರು ಬೆಂಬಲಿಸಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ್ , ಶಿವಮೂರ್ತಿ, ಚಂದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post