ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನಸಭಾ ಪ್ರಸ್ತುತ ಕಲಾಪದಿಂದ ಬಿಜೆಪಿಯ 10 ಸದಸ್ಯರನ್ನು ಅಮಾನತುಗೊಳಿಸಿರುವ ಕ್ರಮವನ್ನು ಖಂಡಿಸಿರುವ ಜಿಲ್ಲಾ ಬಿಜೆಪಿ ಮುಖಂಡ ಎಸ್. ದತ್ತಾತ್ರಿ, S Dattatri ಇದು ಸರ್ವಾಧಿಕಾರಿ ಧೋರಣೆಗೆ ಹಿಡಿದ ಕನ್ನಡಿ ಎಂದಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ, ಅವರು ಆಡಳಿತದಲ್ಲಿದ್ದಾಗಲೀ, ವಿರೋಧ ಪಕ್ಷದಲ್ಲಿದ್ದಾಗಲೀ ಪ್ರಜಾಪ್ರಭುತ್ವದ ವ್ಯವಸ್ಥೆಗೆ ತಕ್ಕನಾದ ಗೌರವ ನೀಡದಿರುವುದು ಹಲವಾರು ಪ್ರಕರಣಗಳಿಂದ ಜನತೆಗೆ ತಿಳಿದಿದೆ ಎಂದಿದ್ದಾರೆ.
1975ರಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿ ಈ ದೇಶದ ಜನತೆಯ ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿದುಕೊಂಡಿದ್ದು ಒಂದು ಇತಿಹಾಸ. ಕರ್ನಾಟಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಿನ್ನೆ ದಿನ ಕರಾಳದಿನ. ವಿಧಾನಸಭೆಯಲ್ಲಿ 10ಜನ ಬಿಜೆಪಿ ಶಾಸಕರನ್ನು ಈ ಅಧಿವೇಶನದಿಂದ ವಜಾ ಮಾಡುವ ಮೂಲಕ ಮತ್ತೊಮ್ಮೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿರುವುದು ಅತ್ಯಂತ ಹೇಯಕರ. ವಿಧಾನಸಭೆಯಲ್ಲಿ ಈ ರೀತಿ ಪ್ರತಿಭಟನೆ ಮಾಡುವುದು ಸಹಜ ಪ್ರಕ್ರಿಯೆ. ಆದರೆ ಪ್ರತಿಭಟನೆ ಮಾಡುವುದೇ ದೊಡ್ಡ ಅಪರಾಧ ಎಂಬAತೆ 10 ಜನ ಶಾಸಕರನ್ನು ವಜಾಗೊಳಿಸಿದ ಮಾನ್ಯ ಸಭಾಪತಿಗಳ ನಿರ್ಧಾರ ಅತ್ಯಂತ ಖಂಡನೀಯ ಎಂದಿದ್ದಾರೆ.
Also read: ಶಿವಮೊಗ್ಗಕ್ಕೆ ಎರಡು ದಿನ ರಾಜ್ಯಪಾಲ ಗೆಹ್ಲೋಟ್ ಪ್ರವಾಸ: ಎಲ್ಲಿಗೆಲ್ಲಾ ಭೇಟಿ ನೀಡಲಿದ್ದಾರೆ?
ಸರ್ವಾಧಿಕಾರಿ ವರ್ತನೆ ಕಾಂಗ್ರೆಸ್‌ನ ವಂಶಾವಳಿ ಗುಣ. ಅದರಂತೆ ಅತ್ಯಂತ ದುರಹಂಕಾರದಿAದ ಮಾನ್ಯ ಸಭಾಪತಿಗಳು ಈ ಶಿಕ್ಷೆಯನ್ನು ನೀಡಿಅದನ್ನು ಸದನದಲ್ಲಿ ಸಮರ್ಥಿಸಿಕೊಳ್ಳುವುದು ಅಲ್ಲದೇ ತಮ್ಮ ಭಾಷಣದಲ್ಲಿ ಈ ಶಿಕ್ಷೆ ಕೇವಲ ಒಂದು ಉದಾಹರಣೆ. ಹೀಗೆ ಬಿಜೆಪಿ ಶಾಸಕರು ತಮ್ಮ ನಿಲುವು ಮುಂದುವರೆಸಿದರೆ ಕಠಿಣಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತುಗಳು ಇವರ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.
ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದ ಬಾಗಿಲನ್ನು ಒದ್ದು ತಮ್ಮ ದುರ್ನಡತೆಯನ್ನು ಪ್ರದರ್ಶಿಸಿದ್ದಾರೆ. ಹಾಗೆಯೇ ಧರ್ಮೇಗೌಡರನ್ನು ವಿಧಾನ ಪರಿಷತ್‌ನಲ್ಲಿ ಕೈಹಿಡಿದು ಎಳೆದಾಡಿ ಅವರನ್ನು ಗೌರವಯುತ ವಾದ ಪೀಠದಿಂದ ಎಳೆದು ತಂದು ಅವರ ಮನಸ್ಸಿಗೆ ನೋವುಂಟು ಮಾಡಿದ ಕಾಂಗ್ರೆಸ್ ಶಾಸಕರಿಂದ ನಾವು ಪಾಠ ಕಲಿಯಬೇಕಿಲ್ಲ. ಈ ರೀತಿ ಅಮಾನತ್ತಿನ ಶಿಕ್ಷೆ ಕೊಡುವ ಮೂಲಕ ಬಿಜೆಪಿ ಶಾಸಕರ ಬಾಯಿ ಮುಚ್ಚಿಸುವ ಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಅತ್ಯಂತ ಖಂಡನೀಯ. ಘನತೆವೆತ್ತ ರಾಜ್ಯಪಾಲರು ತಕ್ಷಣ ಮಧ್ಯೆ ಪ್ರವೇಶಿಸಿ ಬಿಜೆಪಿ ಶಾಸಕರ ಅಮಾನತ್ತನ್ನು ಹಿಂದಕ್ಕೆ ಪಡೆಯ ಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post