ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ K S Eshwarappa ಹಾಗೂ ಸಂಸದ ಬಿ.ವೈ. ರಾಘವೇಂದ್ರ MP B Y Raghavendra ಅವರುಗಳು ಒಂದೇ ಬೈಕ್’ನಲ್ಲಿ ಸಾಗುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಬಿಜೆಪಿ ವತಿಯಿಂದ ಎಂಆರ್’ಎಸ್ ವೃತ್ತದಿಂದ ಹರ್ ಘರ್ ತಿರಂಗಾ ಬೈಕ್ ಜಾಥಾ ನಡೆಸಲಾಯಿತು.
ಈ ಬೈಕ್ ಜಾಥಾದಲ್ಲಿ ಈಶ್ವರಪ್ಪ ಅವರು ಬೈಕ್ ಚಲಾಯಿಸಿ, ರಾಘವೇಂದ್ರ ಹಿಂದೆ ಕುಳಿತು ಸಾಗಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿತ್ತು.
ವಿಧಾನ ಪರಿಷತ್ತಿನ ಶಾಸಕ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ರಾಜ್ಯ ಪ್ರಕೊಷ್ಠಗಳ ಸಂಯೋಜಕ ಭಾನುಪ್ರಕಾಶ್, ವಿಭಾಗ ಪ್ರಭಾರಿಯಾದ ಗಿರೀಶ್ ಪಟೇಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಶ್ರೀನಾಥ್, ಶಿವರಾಜು, ಬಿಜೆಪಿಯ ನಗರಾಧ್ಯಕ್ಷ ಜಗದೀಶ, ಮೇಯರ್ ಸುನಿತಾ ಅಣ್ಣಪ್ಪ, ಶ್ರೀಕಾಂತ್, ಎಸ್. ದತ್ತಾತ್ರಿ, ಚನ್ನಬಸಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್ ಮತ್ತು ವಿವಿಧ ನಿಗಮ ಹಾಗೂ ಮಂಡಳಿ ಅಧ್ಯಕ್ಷರು, ಸದಸ್ಯರು, ಬಿಜೆಪಿಯ ಮಹಾನಗರ ಪಾಲಿಕೆಯ ಸದಸ್ಯರುಗಳು, ವಿವಿಧ ಮಂಡಲ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಭಾಗವಹಿಸಿದ್ದರು.
Also read: ಸಂಗೀತದ ರಸದೌತಣ ಉಣಬಡಿಸಿದ ಸುರಾನ ‘ನೈಟಿಂಗೇಲ್ ಸೀಸನ್-3

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















