ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ಹೊರಬಿದ್ದಿದ್ದು, ರಾಜಮನೆತನದವರಿಗೆ ಆಭರಣ ವ್ಯಾಪಾರಿಯಾಗಿದ್ದ 150 ವರ್ಷ ಇತಿಹಾಸವುಳ್ಳ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್’ನಿಂದ ಇದೀಗ ಶಿವಮೊಗ್ಗದ ಜನತೆಗಾಗಿ ಅಸಾಧಾರಣ ಕರಕುಶಲತೆ ಮತ್ತು ವಿನ್ಯಾಸ ಹೊಂದಿರುವ ಆಭರಣ ಪ್ರದರ್ಶನ ಮತ್ತು ಮಾರಾಟ Jewelry Exhibition and Sale ಆಯೋಜಿಸಲಾಗಿದೆ.
ಜುಲೈ 22ರಿಂದ 24ರವರೆಗೂ ಮೂರು ದಿನಗಳ ಕಾಲ ಹೋಟೆಲ್ ರಾಯಲ್ ಆರ್ಕಿಡ್’ನಲ್ಲಿ Royal Orchid ಈ ವಿಶೇಷ ಆಭರಣ ಪ್ರದರ್ಶನ ನಡೆಯಲಿದ್ದು, ಸಾಂಪ್ರದಾಯಿಕ ಮತ್ತು ಸಮಕಾಲೀನ ಕಸೂತಿ ಸಂಗ್ರಹದ ವಿಶಿಷ್ಟ ಶ್ರೇಣಿಯೊಂದಿಗೆ ಅಸಾಧಾರಣ ಆಭರಣ ಪ್ರದರ್ಶನ ನಡೆಯಲಿದೆ.
ನಾಳೆ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಈ ಪ್ರದರ್ಶನ ಹಾಗೂ ಮಾರಾಟವನ್ನು ಉದ್ಘಾಟಿಸಲಿದ್ದಾರೆ.
Also read: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಭದ್ರಾವತಿಯಲ್ಲಿ ಎಷ್ಟು ಕೇಂದ್ರಗಳಿವೆ? ಇಲ್ಲಿದೆ ಮಾಹಿತಿ
ಶಿವಮೊಗ್ಗ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ 1 ಕ್ಯಾರೆಟ್ ವಜ್ರ ಖರೀದಿಗೆ 2 ಗ್ರಾಂ ಚಿನ್ನದ ನಾಣ್ಯ ಮತ್ತು 1 ಗ್ರಾಂ ಚಿನ್ನ ಖರೀದಿಗೆ 3 ಗ್ರಾಂ ಬೆಳ್ಳಿ ನಾಣ್ಯ ಉಚಿತ. ಕೊಡುಗೆ 22.07.2023 ರಂದು ಪ್ರಾರಂಭವಾಗುತ್ತದೆ ಮತ್ತು 24.07.2023 ರಂದು ಕೊನೆಗೊಳ್ಳುತ್ತದೆ. ಷರತ್ತುಗಳು ಅನ್ವಯವಾಗುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post