ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಿನ್ನೆ ರಾತ್ರಿ ಕಿಡಿಗೇಡಿಗಳ ಹೀನ ಕೃತ್ಯಕ್ಕೆ ಸಿದ್ದಯ್ಯ, ಎಂಕೆಕೆ ರಸ್ತೆಯಲ್ಲಿನ ಅನೇಕ ವಾಹನಗಳು ಬಲಿಯಾಗಿದ್ದು, ಈ ಕೃತ್ಯವನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಎಸ್ ದತ್ತಾತ್ರಿ ಖಂಡಿಸಿದ್ದಾರೆ.
ನಗರದ ಸಿದ್ದಯ್ಯ ಹಾಗೂ ಎಂಕೆಕೆ ರಸ್ತೆಯಲ್ಲಿ ನಿಂತ್ತಿದ್ದ ಅನೇಕ ಕಾರು, ಆಟೋ, ದ್ವಿಚಕ್ರ ವಾಹನಗಳನ್ನು ನಿನ್ನೆ ರಾತ್ರಿ ಕಿಡಿಗೇಡಿಗಳು ಜಖಂ ಮಾಡಿ ನಗರದಲ್ಲಿ ಅಶಾಂತಿ ಮೂಡಿಸುವ ಕೃತ್ಯಕೆ ಕೈ ಹಾಕಿದ್ದಾರೆ.
ಈ ಕೊರೋನ ಸಂಕಷ್ಟ ಸಂಧರ್ಭದಲ್ಲೂ ಕೂಡ ಕೋಮು ಪ್ರಚೋದನೆಗೆ ಪ್ರಯತ್ನಿಸುತ್ತಿರುವ ಈ ಕಿಡಿಗೇಡಿಗಳ ಕೃತ್ಯ ಖಂಡನೀಯವಾದದ್ದು ಎಂದು ತಿಳಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿಗಳು ಈ ಕೃತ್ಯಕ್ಕೆ ವಿಶೇಷವಾಗಿ ಕ್ರಮ ಕೈಗೊಂಡು, ತಕ್ಷಣ ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಬೇಕು ಜೊತೆಗೆ ನಗರದಲ್ಲಿ ಕೋಮು ಪ್ರಚೋದನೆ ಭಾವನೆಯನ್ನು ಉಂಟುಮಾಡುತ್ತಿರುವ ವಿಡಿಯೋಗಳು ಮೊಬೈಲ್ ನಲ್ಲಿ ಹರಿದಾಡುತ್ತಿದ್ದು ಅವರ ಮೇಲು ಕೂಡ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ದತ್ತಾತ್ರಿ ಅವರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post