ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2025-26 ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ #Dasara Sports ಆಯೋಜನೆ ಮಾಡಲಾಗಿದೆ.
ಕ್ರೀಡಾ ಕೂಟವನ್ನು ಆಯಾ ತಾಲ್ಲೂಕುಗಳಲ್ಲಿ ಆಯೋಜನೆ ಮಾಡಲಾಗಿದೆ. ದಿ: 16-08-2025 ರಂದು ನೆಹರು ಕ್ರೀಡಾಂಗಣ ಶಿವಮೊಗ್ಗ. ದಿ: 17-08-2025 ರಂದು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ ತೀರ್ಥಹಳ್ಳಿ. ದಿ: 22-08-2025 ತಾಲ್ಲೂಕು ಕ್ರೀಡಾಂಗಣ ಶಿಕಾರಿಪುರ. ದಿ: 23-08-2025 ರಂದು ತಾಲ್ಲೂಕು ಕ್ರೀಡಾಂಗಣ ಹೊಸನಗರ. ದಿ: 24-08-2025 ರಂದು ನೆಹರೂ ಮೈದಾನ ಸಾಗರ, ವಿ.ಐ.ಎಸ್.ಎಲ್. ಕ್ರೀಡಾಂಗಣ ಭದ್ರಾವತಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಸೊರಬ ಇಲ್ಲಿ ನೆಡೆಸಲಾಗುವುದು.

ಆಯಾ ತಾಲ್ಲೂಕಿನ ಕ್ರೀಡಾಪಟುಗಳು ಆಯಾ ತಾಲ್ಲೂಕಿನಲ್ಲಿ ಮಾತ್ರ ಭಾಗವಹಿಸಲು ಅರ್ಹತೆ ಹೊಂದಿರುತ್ತಾರೆ. ಭಾಗವಹಿಸುವ ಸಮಯದಲ್ಲಿ ಮೂಲ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿರುತ್ತದೆ. ಬೇರೆ ತಾಲ್ಲೂಕಿನ ಆಟಗಾರರು ಭಾಗವಹಿಸಬೇಕಾದರೆ ಆ ತಾಲ್ಲೂಕಿನಲ್ಲಿ ಅವರು ಶಿಕ್ಷಣ ಪಡೆಯುತ್ತಿರಬೇಕು. ಒಂದು ವೇಳೆ ಬೇರೆ ತಾಲ್ಲೂಕಿನ ಆಟಗಾರರು ಕ್ರೀಡೆಯಲ್ಲಿ ಪಾಲ್ಗೂಂಡಲ್ಲಿ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಲಾಗುವುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post