ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಸೌಲಭ್ಯ ಕಲ್ಪಿಸುವ ಮೂಲಕ ಉನ್ನತ ಸಾಧನೆ ಮಾಡುವಂತೆ ಪ್ರೇರೇಪಿಸುವ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಶರತ್ ಮುರಿಯಪ್ಪ ಹೇಳಿದರು.
ರಾಮೇನಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಾಂತ್ವಾನ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ಪುಸ್ತಕಗಳನ್ನು ನೀಡಿ ಮಾತನಾಡಿದರು.

ಸಾಂತ್ವಾನ ಟ್ರಸ್ಟ್ ವತಿಯಿಂದ ರಾಮೇನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ಬುಕ್ ನೀಡಿದ ಕಾರ್ಯಕ್ರಮದ ಸಂದರ್ಭದಲ್ಲಿ ಪರಿಸರ ಉಳಿವಿಗಾಗಿ ಶಾಲೆಯಲ್ಲಿ ಸಸಿ ನೆಡುವುದರ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಯಿತು.

ಸಾಂತ್ವಾನ ಟ್ರಸ್ಟ್‌ನ ವಿನಯ್, ಪ್ರಕಾಶ್, ರಘು, ರಾಮೇನಕೊಪ್ಪ ಗ್ರಾಮಸ್ಥರಾದ ರಮೇಶ್, ರಾಘವೇಂದ್ರ, ಸತೀಶ್ ಜಬ್ಬರ್, ಫೈರೋಜ್, ರಂಗಸ್ವಾಮಣ್ಣ, ಅಭಿಲಾಷ್ ಹಾಗೂ ಶಿಕ್ಷಕರ ವೃಂದದವರು ಉಪಸ್ಥಿತರಿದ್ದರು.









Discussion about this post