ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಇಂದಿನಿಂದ ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ಆರಂಭಗೊಂಡಿರುವ ಕೋವಿಡ್ ಕೇರ್ ಸೆಂಟರ್‌ಗೆ ಜವಳಿ ವರ್ತಕರ ಸಂಘದ ವತಿಯಿಂದ 300 ಬೆಡ್ ಶೀಟುಗಳು, ಪಿಲ್ಲೋಕವರ್’ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಳಿ ವರ್ತಕರ ಸಂಘದ ಅಧ್ಯಕ್ಷರಾದ ವೆಂಕಟೇಶ ಮೂರ್ತಿ, ಉಪಾಧ್ಯಕ್ಷ ಸುರೇಶ್ ಕುಮಾರ್, ಕಾರ್ಯದರ್ಶಿ, ಸಹಕಾರ್ಯದರ್ಶಿ ಹಾಗೂ ಖಜಾಂಚಿಗಳಾದ ಪ್ರಭಾಕರ್, ರಾಕೇಶ್ ಸಾಕ್ರೆ, ಪ್ರಮೋದ್ ಉತ್ತರ್‌ಕರ್ ಹಾಜರಿದ್ದು, ಬೆಡ್ ಶೀಟ್ಸ್ ಹಾಗೂ ಪಿಲ್ಲೋಕವರ್ ನೀಡಿದರು.
ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಉಪಸ್ಥಿತರಿದ್ದು, ಸಂಕಷ್ಟದಲ್ಲಿರುವಾಗಲೂ ಸಹ ಜವಳಿ ವರ್ತಕರು ತಮ್ಮ ಸಂಘದ ಮೂಲಕ ನೀಡಿದ ಕೊಡುಗೆಯನ್ನು ಸ್ಮರಿಸಿ, ಅಭಿನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post