ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್ ಸುರಕ್ಷಾ ಪಡೆಯಿಂದ ನಗರದ ನಾಗರಿಕರಿಗೆ ವಿತರಣೆ ಮಾಡುತ್ತಿರುವ ಆಯುರ್ವೇದಿಕ್ ಕಿಟ್ ಸಂಪೂರ್ಣ ಉಚಿತವಾಗಿದ್ದು, ಯಾರೂ ಹಣ ನೀಡಬೇಕಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಈಗಾಗಲೇ ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಆಧಾರ್ ಕಾರ್ಡ್ ಪರಿಶೀಲಿಸಿ ಆಯುರ್ವೇದಿಕ್ ಕಿಟ್ ವಿತರಣೆ ಮಾಡುತ್ತಿದ್ದಾರೆ. ಒಟ್ಟು ನಾಲ್ಕು ಲಕ್ಷ ಮಂದಿಗೆ ನಗರದಲ್ಲಿ ಈ ಕಿಟ್ ವಿತರಣೆ ಮಾಡಲಾಗುತ್ತಿದೆ. ಈ ಕಿಟ್ ಸಂಫೂರ್ಣ ಉಚಿತವಾಗಿದ್ದು, ಯಾರೂ ಹಣ ನೀಡಬೇಕಿಲ್ಲ. ಇಂತಹ ಸಂದರ್ಭದಲ್ಲಿ ಕಿಟ್ ನೀಡಲು ಯಾರಾದರೂ ಹಣದ ಬೇಡಿಕೆ ಇಟ್ಟರೆ ತಕ್ಷಣವೇ ನಮಗೆ ಹಾಗೂ ನಮ್ಮ ಕಾರ್ಯಕರ್ತರ ಗಮನಕ್ಕೆ ತನ್ನಿ ಎಂದು ಕೋರಿದ್ದಾರೆ.
ನಗರ ವ್ಯಾಪ್ತಿಯಲ್ಲಿರುವ ನಾಗರಿಕರು ಈ ಕಿಟ್ ಪಡೆದುಕೊಂಡು, ಅದನ್ನು ಬಳಸಿ, ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.ಇದೇ ವೇಳೆ ಇಂತಹ ಒಂದು ಬೃಹತ್ ಕಾರ್ಯಕ್ಕೆ ಸಹಕಾರ ನೀಡಿರುವ ನಗರದ ಸಂಘ ಸಂಸ್ಥೆಗಳು, ನಾಗರಿಕರು ಹಾಗೂ ಎಲ್ಲ ದಾನಿಗಳಿಗೆ ಕೋವಿಡ್ ಸುರಕ್ಷಾ ಪಡೆಯ ವತಿಯಿಂದ ಅವರು ಧನ್ಯವಾದ ಹೇಳಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post