ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಮಾಜದ ಸರ್ವತೋಮುಖ ಪ್ರಗತಿಗೆ ಶ್ರಮಿಸುವಲ್ಲಿ ಪ್ರತಿಯೊಬ್ಬ ನಾಗರಿಕನದೂ ಪಾಲಿದೆ. ಆದರೆ, ಈಗ ಸೇವೆ ಎಂದರೆ ಪ್ರಚಾರದ ಮುಖವಾಡ ಹೊಂದಿದೆ ಎಂದು ಶಿವಮೊಗ್ಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹ ಪಟ್ಟಾಭಿರಾಮ ಮತ್ತೂರು ಅಭಿಪ್ರಾಯಪಟ್ಟರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಅವರು ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯು ಕೊರೋನಾ ವಾರಿಯರ್ಸ್‌ಗಳಿಗೆ ಶಿವಮೊಗ್ಗ ಶಿವಗಂಗಾ ಯೋಗ ಕೇಂದ್ರದ ಯೋಗ ಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ವಿವಿಧ ವೃತ್ತಿ ಬಾಂಧವರನ್ನ ಕಲೆಹಾಕಿ ಒಂದು ಸಂಯುಕ್ತ ವೇದಿಕೆ ಸ್ಥಾಪಿಸಿ ಸಮಾಜಕ್ಕೆ ಉಪಕರಿಸಿದ್ದಾರೆ. ಯಾರಿಂದಲೂ ಏನನ್ನೂ ನಿರೀಕ್ಷಸದೇ ಕೋವಿಡ್ ವಿರುದ್ಧ ಜನಜಾಗೃತಿ ಮಾಡಿದ್ದಾರೆ. ಇದು ನಿಜಾವಾದ ಸೇವೆ ಎಂದು ಶ್ಲಾಘಿಸಿದರು.
ಕೋವಿಡ್ ನಂತಹ ಪರಿಸ್ಥಿತಿಯಲ್ಲಿ ಅನೇಕ ವ್ಯಕ್ತಿಗಳು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕೊರೋನಾ ಪಡೆಯ ಯೋಧರಾಗಿ ದುಡಿದಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳ ವೃತ್ತಿಯವರ ತ್ಯಾಗ, ಅರ್ಪಣಾ ಮನೋಭಾವದ ಕಾರ್ಯವನ್ನು ಎಷ್ಟು ಶ್ಲಾಘಿಸಿದರೂ ಸಾಲದು. ಸೇವೆ ಎನ್ನುವ ಕುರಿತು ಕೃಷ್ಣನೇ ಭಗವದ್ಗೀತೆಯಲ್ಲಿ ಸೇವಾ ಹೀ ಪರಮೋಧರ್ಮಃ ಎಂದಿದ್ದಾನೆ ಎಂದು ಹೇಳಿದರು.
ಶಿವಮೊಗ್ಗ ರಾಸ್ವಸಂ ನಿಂದ ಮುಂಬರುವ ಕೋವಿಡ್ ಮೂರನೇ ಅಲೆ ಎದುರಿಸಲು ಸರ್ವ ರಾಜಕೀಯ ಪಕ್ಷಗಳು, ಮುಖಂಡರು, ಮಹಿಳೆಯರು, ಯುವಜನ ಸಂಘಟನೆಗಳು, ಇಲಾಖಾ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಜೊತೆ ಸಂಯುಕ್ತವಾಗಿ ಗಾಮೀಣ ಕೋವಿಡ್ ಸುರಕ್ಷಾ ಪಡೆ ರಚಿಸಲಾಗುವುದು. ಎಲ್ಲರೂ ಈ ಸಾಮಾಜಿಕ ಜಾಗೃತಿ ಆಂದೋಲನಕ್ಕೆ ಸಹಕರಿಸಲು ಕೋರಿದರು.
ವೇದಿಕೆಯಲ್ಲಿ ಶಿವಗಂಗಾ ಯೋಗ ಕೇಂದ್ರದ ರುದ್ರಾರಾಧ್ಯ, ಪರಿಸರ ಅಧ್ಯಯನ ಕೇಂದ್ರದ ಜೆ.ಎಲ್. ಜನಾರ್ದನ್, ಐಎಂಎ ಅಧ್ಯಕ್ಷ ಡಾ ಪರಮೇಶ್ವರ ಶಿಗ್ಗಾಂವ್, ಕ್ಷೇಮ ಟ್ರಸ್ಟ್‌ನ ಡಾ. ಕೆ .ಆರ್. ಶ್ರೀಧರ್, ಯೂತ್ ಹಾಸ್ಟೆಲ್ಸ್‌ನ ವಿಜಯ ಕುಮಾರ್, ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಪರಿವರ್ತನ ಸಂಸ್ಥೆಯ ಕೆ. ಸಿ. ಬಸವರಾಜ್, ಭಾರತ್ ಟಿವಿ ಯ ಹಾಲಸ್ವಾಮಿ, ಎನ್‌ಇಎಸ್‌ನ ಉಪಾಧ್ಯಕ್ಷ ಅಶ್ತತ್ಥನಾರಾಯಣ ಶೆಟ್ಟಿ, ಅಭಿರುಚಿಯ ಡಾ. ಶಿವರಾಮ ಕೃಷ್ಣ, ಹಾಗೂ ರೋಟರಿ ಜಿಲ್ಲಾ ಗವರ್ನರ್ ಎಂ.ಜಿ. ರಾಮಚಂದ್ರ ಮೂರ್ತಿ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ಜನ ಜಾಗೃತಿಮೂಡಿಸಿದ ಕೊರೋನಾ ಯೋಧ ಪಡೆಯ ಸದಸ್ಯರನ್ನು ಅಭಿನಂದಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post