ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂದಿನ ಪೀಳಿಗೆಗೆ ಗಮಕ ಕಲೆಯನ್ನು ದಾಟಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ನಿವ೯ಹಿಸಿದ್ದ ನಾಡಿನ ಹೆಸರಾಂತ ಗಮಕಿಗಳು, ಪದ್ಮಶ್ರೀ ಪ್ರಶಸ್ಸಿಗೆ ಭಾಜನರಾಗಿದ್ದ ಹೆಚ್. ಆರ್. ಕೇಶವ ಮೂರ್ತಿರವರ ನಿಧನದಿಂದಾಗಿ ಗಮಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಸಂತಾಪ ವ್ಯಕ್ತಪಡಿಸಿದೆ.
ಈ ಸಂಬಂಧವಾಗಿ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷರಾದ ಕೆ. ವಿ. ಶಿವಕುಮಾರ್, ಪ್ರಧಾನ ಕಾಯ೯ದಶಿ೯ ವಿ. ಟಿ. ಅರುಣ್, ರಾಜ್ಯ ಸಮಿತಿ ನಿದೇ೯ಶಕ ಎನ್. ರವಿಕುಮಾರ್ ಹಾಗೂ ಕಾಯ೯ಕಾರಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗಮಕ ವಾಚನ, ವ್ಯಾಖ್ಯಾನಕ್ಕೆ ಪರಂಪರಾಗತ ಮೌಲ್ಯಗಳ ಜೊತೆಗೆ ಹೊಸ ಆಯಾಮ ನೀಡಿದ ಹಿರಿಮೆ ಇವರದ್ದಾಗಿದೆ.ಮೃತರ ಆತ್ಮಕ್ಕೆ ಸದ್ಗತಿ ಕೋರಿ, ಅವರ ಅಗಲಿಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾಥಿ೯ಸಿದ್ದಾರೆ.
ಸಂತಾಪ ಸೂಚಕ ಸಭೆಯಲ್ಲಿ ಪತ್ರಕತ೯ರ ಸಂಘದ ಉಪಾಧ್ಯಕ್ಷ ವೈದ್ಯ, ಹೆಚ್. ಆರ್. ಕೇಶವಮೂತಿ೯ರವರನ್ನು ಕುರಿತು ಮಾತನಾಡಿದರು. ಸಂಘದ ಉಪಾಧ್ಯಕ್ಷ ಹಾಲಸ್ವಾಮಿ ಸೇರಿದಂತೆ ವಿಪ್ರ ಸಮಾಜದ ಮುಖಂಡರು, ಪತ್ರಕತ೯ರು, ವಿದ್ಯುನ್ಮಾನ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ:
ಪದ್ಮಶ್ರೀ ಪುರಸ್ಕೃತ, ಗಮಕ ಗಾನ ಗಂಧರ್ವ, ಗಮಕ ಸಾಮ್ರಾಟ ಹೊಸಹಳ್ಳಿ ಹೆಚ್.ಆರ್.ಕೇಶವಮೂರ್ತಿ ಅವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್‌ಟ್ರಸ್ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಹೆಚ್.ಆರ್. ಕೇಶವಮೂರ್ತಿ ಅವರು ಗಮಕ ಕಲೆಯಲ್ಲಿ 70 ವರ್ಷಗಳ ಕಾಲ ಅಗಾದ ಸಾಧನೆ ಮಾಡಿದವರು. ಗಮಕ ಕಲೆಗೊಂದು ಗತ್ತು-ಗೈರತ್ತು ತಂದುಕೊಟ್ಟವರು. ರಾಯಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡವರು. 100 ಕ್ಕೂ ಹೆಚ್ಚು ವಿಭಿನ್ನ ರಾಗಗಗಳಲ್ಲಿ ವಾಚನ ಮಾಡುವ ಮೂಲಕ ‘ಶತಕರಾಗಿ’ ಎಂಬ ಬಿರುದಿಗೆ ಇವರು ಪಾತ್ರರಾದವರು. ರಾಜ್ಯ ಹಾಗೂ ದೇಶದ ಹಲವಡೆ ನಡೆದ ಸಂಗೀತ ಕಾರ್ಯಕ್ರಮ ನಡೆಸಿ ಗಮಕ ವಾಚನದ ಮೂಲಕ ಗಮನ ಸೆಳೆದಿರುವ ಕೇಶವಮೂರ್ತಿ ಸಾಧನೆಗೆ ಪದ್ಮಶ್ರೀ, ಕುಮಾರವ್ಯಾಾಸ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಗಮಕ ಕಲೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕೇಶವ ಮೂರ್ತಿಯವರ ನಿಧನದಿಂದ ಸಾಂಸ್ಕೃತಿಕ ಲೋಕ ಬಡವಾಗಿದೆ.
ಇವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಗೌರವಾಧ್ಯಕ್ಷ ಎಸ್.ಚಂದ್ರಕಾಂತ್, ಉಪಾಧ್ಯಕ್ಷ ಕೆ.ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ. ಕಾರ್ಯದರ್ಶಿ ಗೋ.ವಾ ಮೋಹನಕೃಷ್ಣ, ಖಜಾಂಚಿ ಶಿವಮೊಗ್ಗ ನಂದನ್, ಪ್ರೆಸ್‌ಟ್ರಸ್ ಅಧ್ಯಕ್ಷ ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಖಜಾಂಚಿ ಜೇಸುದಾಸ್ ಸೇರಿದಂತೆ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
Also read: ಸಕಲ ಸರ್ಕಾರಿ ಗೌರವಗಳೊಂದಿಗೆ ಹೊಸಹಳ್ಳಿ ಕೇಶವಮೂರ್ತಿಗಳ ಅಂತ್ಯಕ್ರಿಯೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post