ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ ಮೂರು ನಾಲ್ಕು ದಶಕಗಳ ಕಾಲ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ಬಾರಿ ಚುನಾವಣೆಯ ಟಿಕೇಟ್ ಕೈತಪ್ಪಿದರೂ ಸಹ ಬೇಸರಿಸಿಕೊಳ್ಳದೇ ಘನತೆಯ ಮಾತುಗಳನ್ನಾಡುವ ಮೂಲಕ ತಮ್ಮ ಸಂಸ್ಕಾರವನ್ನು ಮೆರೆದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್, #KEKanteesh ನಾವೂ ಈಗಾಗಲೇ ಹೇಳಿರುವ ಮಾತಿಗೆ ಬದ್ದರಾಗಿದ್ದು, ಪಕ್ಷ ನಿರ್ಧರಿಸಿದ ವ್ಯಕ್ತಿಯ ಪರವಾಗಿಯೇ ಕೆಲಸ ಮಾಡುತ್ತೇವೆ ಎನ್ನುವುದನ್ನೇ ಈಗಲೂ ಪುನಃ ಉಚ್ಚರಿಸುತ್ತೇವೆ ಎಂದರು.

1989ರಿಂದ ಚನ್ನಬಸಪ್ಪ #Chennabasappa ನನ್ನ ತಂದೆಯ ಪರವಾಗಿ ಸ್ವಂತ ಮಗನ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಈಗ ಅವರಿಗೆ ಅವಕಾಶ ದೊರೆತಿದೆ. ಸಾಮಾನ್ಯ ಕಾರ್ಯಕರ್ತನೊಬ್ಬರಿಗೆ ಟಿಕೇಟ್ ನೀಡಿದ್ದನ್ನು ಶಿವಮೊಗ್ಗ #Shivamogga ಜನತೆ ಪ್ರೀತಿಯಿಂದ ಅಪ್ಪಿಕೊಂಡು ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಪಕ್ಷ ಟಿಕೇಟ್ ಘೋಷಣೆ ಮಾಡುವ ಮುನ್ನವೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಂದೆಯವರು ಘೋಷಣೆ ಮಾಡಿದ್ದರು. ಇದಕ್ಕೆ ಕ್ಷೇತ್ರದ ಜನರೂ ಸಹ ಸಂತೋಷದಿಂದ ಸಮ್ಮಿತಿಸಿದ್ದಾರೆ. ಪಕ್ಷ ಸೂಚಿಸಿರುವ ಚೆನ್ನಬಸಪ್ಪ ಗೆಲುವಿಗಾಗಿ ನಮ್ಮ ಕುಟುಂಬ ಬೆಂಬಲ ನೀಡುತ್ತದೆ. ಅಲ್ಲದೇ, ಚೆನ್ನಬಸಪ್ಪ ಅವರು ಚುನಾವಣೆಯಲ್ಲಿ 60 ಸಾವಿರಕ್ಕೂ ಅಧಿಕ ಅಂತರದ ಬಹುಮತದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.









Discussion about this post