ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರ್.ಆರ್. ಮೂವಿ ಮೇಕರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಭರವಸೆ ಚಲನಚಿತ್ರ ಆ. 8ರಂದು ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಎ.ಎನ್. ಮುತ್ತು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಚಲನಚಿತ್ರವು ಶಿವಮೊಗ್ಗದಲ್ಲಿಯೇ ಹೆಚ್ಚು ಚಿತ್ರೀಕರಣವಾಗಿದೆ. 5 ಹಾಡುಗಳಿವೆ. ರಾಜೇಶ್ ಕೃಷ್ಣನ್, ಅನುರಾಧ ಭಟ್ ಸೇರಿದಂತೆ ಹಲವರು ಹಾಡಿದ್ದಾರೆ. ಜೀವನದಲ್ಲಿ ಏನನ್ನೋ ಪಡೆದುಕೊಳ್ಳುವ ಭರವಸೆಯಲ್ಲಿ ನಾವಿರುತ್ತೇವೆ. ಅದೇ ಚಿತ್ರದ ತಿರುಳಾಗಿರುತ್ತದೆ. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಿನ ಪ್ರೇಮದ ಭರವಸೆ ಈ ಚಿತ್ರದಲ್ಲಿದೆ ಎಂದರು.
ವಿನಯರಾಜ್, ಅಹಲ್ಯಾ ಸುರೇಶ್, ಶೋಭರಾಜ್, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಹಾಗೂ ನಟ ಬಿ.ಸಿ. ನಾಗರಾಜ್, ಸಂತೋಷ್, ಚೇತನಾ ಶೆಟ್ಟಿ, ಗುರುಮೂರ್ತಿ, ಅರ್ಚನಾ ನಿರಂಜನ್, ಸ್ನೇಕ್ ಸುಹಾಸ್, ಸಿದ್ಧಾರ್ಥ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post