ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಬಿಜೆಪಿಯ ವೈದ್ಯಕೀಯ ಪ್ರಕೋಷ್ಟದ ವತಿಯಿಂದ ಇಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಜಿಲ್ಲೆಯಲ್ಲಿ ಅವ್ಯಾಹತವಾಗಿ ಹರಡುತ್ತಿರುವ ಡೆಂಗ್ಯೂ, #Dengue ಚಿಕೂನ್ ಗುನ್ಯಾ, #Chickengunya ಜಿಕಾ #Zeeka ವೈರಸ್ ಜ್ವರದ ಬಗ್ಗೆ ವಿವರವಾಗಿ ಮಾಹಿತಿ ಪಡೆಯಲಾಯಿತು.
ಅವಶ್ಯಕವಿರುವ ತುರ್ತು ಕ್ರಮಗಳ ಬಗ್ಗೆ ಜಾರಿಗೆ ತರಲು ಮೆಗ್ಗಾನ್ ಆಸ್ಪತ್ರೆಯ #McGann ಅಧೀಕ್ಷಕರಾದ ಡಾ. ತಿಮ್ಮಪ್ಪರವರನ್ನ ಭೇಟಿ ಮಾಡಿ ಆಗ್ರಹಿಸಲಾಯಿತು.

Also read: ಈಶ್ವರಪ್ಪ ಬಿಜೆಪಿ ಸೇರ್ಪಡೆ | ಸ್ವತಃ ಅವರೇ ನೀಡಿದ ಸ್ಪಷ್ಟನೆಯೇನು?
ಈ ಸಂದರ್ಭದಲ್ಲಿ ಬಿಜೆಪಿಯ ಪ್ರಕೋಷ್ಟ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಅವೈದ್ಯಕೀಯ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯರಾದ ಡಾ. ಸುರೇಶ್ , ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ಡಾ. ಹೇಮಂತ್ ಕುಮಾರ್ , ಪ್ರಕೋಷ್ಟ ಗಳ ಜಿಲ್ಲಾ ಸಂಯೋಜಕರಾದ ಹೃಷಿಕೇಶ್ ಪೈ, ಪ್ರಕೋಷ್ಟಗಳ ಜಿಲ್ಲಾ ಸಹ ಸಂಯೋಜಕರಾದ ಡಾ. ಶ್ರೀನಿವಾಸ್ ರೆಡ್ಡಿ , ಡಾ. ಮರುಳಾರಾಧ್ಯ, ಡಾ. ಗೌತಮ್ , ಡಾ. ಸಂತೋಷ್ , ಹಾಗೂ ಮುರಳೀಧರ್ ರವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post