No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Sunday, October 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಮಂಗಳಮುಖಿಯರ ಬದುಕು ಹಸನುಗೊಳಿಸಲು ಸರ್ಕಾರ ಕಾರ್ಯಕ್ರಮ ರೂಪಿಸುವಂತೆ ಎಂ. ಶ್ರೀಕಾಂತ್‌ ಸಲಹೆ

kalpa News by kalpa News
April 6, 2022
in ಶಿವಮೊಗ್ಗ
0
ಮಂಗಳಮುಖಿಯರ ಬದುಕು ಹಸನುಗೊಳಿಸಲು ಸರ್ಕಾರ ಕಾರ್ಯಕ್ರಮ ರೂಪಿಸುವಂತೆ ಎಂ. ಶ್ರೀಕಾಂತ್‌ ಸಲಹೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ನಾಗರೀಕ ಸಮಾಜದಿಂದ ದೂರ ಉಳಿದಿರುವ, ನಿರ್ಲಕ್ಷ್ಯಕ್ಕೊಳಗಾಗಿರುವ, ಅವಕಾಶಗಳಿಂದ. ಮೂಲಭೂತ ಸಮಸ್ಯೆಗಳಿಂದ ವಂಚಿತರಾಗಿರುವ ಮಂಗಳಮುಖಿಯರ ಬದುಕು ಹಸನಗೊಳ್ಳುವತ್ತ ಸರಕಾರದ ಕನಿಷ್ಠ ಕಾರ್ಯಕ್ರಮಗಳು, ಸಂಘ ಸಂಸ್ಥೆಗಳ ಪ್ರೋತ್ಸಾಹಗಳು ನಿರಂತರಗೊಳಿಸಬೇಕಿದೆ ಎಂದು ಜೆಡಿಎಸ್ ಮುಖಂಡರು ಹಾಗೂ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಸದಸ್ಯ ಎಂ ಶ್ರೀಕಾಂತ್‌ ಅಭಿಪ್ರಾಯಪಟ್ಟರು.

ನಗರದ ಚೆಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಹಾಗೂ ಜೆಸಿಐ ಶಿವಮೊಗ್ಗ ಶ್ರೀರಕ್ಷೆ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಗಳಮುಖಿ ಕಾರ್‍ಯಕ್ರಮವನ್ನು ಉದ್ದೇಶಿಸಿ ಅವರು, ಮಾತನಾಡಿದರು.

ಈ ಹೊತ್ತಿನ ಒಟ್ಟು ಸಮಾಜದಲ್ಲಿ ಮಂಗಳಮುಖಿಯರನ್ನು ಮನುಷ್ಯರೆಂದು ಪರಿಗಣಿಸಲಾಗಿದಿಯೇ..? ಆಗಿದ್ದರೆ ಅವರಿಗೂ ಉದ್ಯೋಗ, ವಸತಿಯನ್ನು ನೀಡುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು.

ನಾಗರೀಕ ಸಮಾಜದಲ್ಲಿ ಬಹುಪಾಲು ಜನರು ಅವರನ್ನು ಅಪಮಾನಿಕರಿಸಿ ನೋಡುತ್ತಿರುವುದು ಅನಾಗರೀಕ ವರ್ತನೆಯಲ್ಲವೇ. ಅವರನ್ನು ಲೈಂಗಿಕ ಕಾರ್ಯಕರ್ತರು, ನಿತ್ಯ ಬಿಕ್ಷಾಟನೆಯಲ್ಲಿ ತೊಡಗಿಸಿಕೊಂಡು ಬೆದರಿಸುತ್ತಾರೆ ಎಂದು ಆರೋಪಿಸುವ ಮೊದಲು ಅವರಿಗೂ ವಿವಿಧ ಸ್ವಯಂ ಉದ್ಯೋಗದ ತರಬೇತಿ ನೀಡಿ ಕೆಲಸ ಕೊಟ್ಟು ಲಿಂಗ ಸಮಾನತೆಯ ಸ್ಥಾನವನ್ನು ನಿಜಕ್ಕೂ ಕೊಟ್ಟಿದ್ದರೆ ನೀವು ಆರೋಪಿಸುವಂತೆ ಅವರ್‍ಯಾಕೆ ಬಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಮುಂದಿನ ದಿನದಲ್ಲಿ ಅವರ ಮೂಲಭೂತ ಸೌಲಭ್ಯಗಳಿಗಾಗಿ ನಾವೆಲ್ಲರು ಸೇರಿಯೇ ದನಿಯಾಗೋಣ. ಅವರನ್ನು ಕಂಡಾಗ ಅನಾಗರೀಕರಾಗಿ ವರ್ತಿಸದೇ ಗೌರವಯುತವಾಗಿ ನಡೆದುಕೊಳ್ಳಬೇಕಿದೆ. ಇದೊಂದು ಅಸ್ವಾಭಾವಿಕ ಲಿಂಗತ್ವ, ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಸಮಾಜದ ಮುಖ್ಯವಾಹಿನಿಯಿಂದ ಹೊರ ತಳ್ಳುವುದು ಅಪಹಾಸ್ಯಗೈಯುವುದು ಸಲ್ಲದು ಎಂದರು.

ಮಂಗಳಮುಖಿಯರಾದ ವೈಷ್ಣವಿ ಮತ್ತು ಅರ್ಚನಾರವರುಗಳನ್ನು ಸನ್ಮಾನಿಸಿಲಾಯಿತು ಹಾಗೂ ನೆರೆದಿದ್ದ 60 ಜನ ಮಂಗಳಮುಖಿಯರಿಗೆ ಜೆಸಿ.ಎಂ ಶ್ರೀಕಾಂತ್ ರವರು ಐದು ಲೀಟರ್ ಪ್ರೆಸ್ಟಿಜಿಯಸ್ ಕಂಪನಿಯ ಕುಕ್ಕರ್‌ಗಳನ್ನು ಉಚಿತವಾಗಿ ವಿತರಿಸಿದರು.

ಗೌರವ ಅತಿಥಿಗಳಾಗಿದ್ದ ಜೆಸಿಐ ಸಂಸ್ಥೆಯ ಪೂರ್ವವಲಯಾಧಿಕಾರಿ ಜೆಸಿ ಗಾ.ರಾ. ಶ್ರೀನಿವಾಸ್ ಮಾತನಾಡಿ, ಬಹುತ್ವ ಭಾವದಡಿ ಎಲ್ಲರಲ್ಲೂ ಮನುಷ್ಯತ್ವವನ್ನೇ ಬಿತ್ತಿ ಮನುಷ್ಯತ್ವವನ್ನೆ ನೋಡಬೇಕಾಗಿರುವ ಈ ಬದಲಾದ ದಿನಮಾನದಲ್ಲಿಯೂ ಮಂಗಳಮುಖಿಯರನ್ನು ಒಟ್ಟು ಸಮಾಜದಲ್ಲಿ ಒಪ್ಪಿಕೊಳ್ಳಲಾಗುತ್ತಿಲ್ಲ ಎನ್ನುವುದೇ ದುರಂತವಾಗಿದೆ. ಕುಟುಂಬದಿಂದ, ಸಹಪಾಠಿಗಳಿಂದ ದೂರ ಉಳಿವ ಮಂಗಳಮುಖಿಯರ ಅತೀವ ಮಾನಸಿಕ ಯಾತನೆಗೊಳಗಾಗಿ ಆತ್ಮಹತ್ಯೆಯಂತಹ ಸ್ಥಿತಿಗೆ ಬಲಿಯಾಗುತ್ತಿದ್ದಾರೆ, ದುಡಿಮೆಗಳಿಲ್ಲದೆ ಅನಿವಾರ್ಯತೆಗಳಲ್ಲಿ ಮುಳುಗಿದ್ದಾರೆ. ಪ್ರೋತ್ಸಾಹಿಸಬೇಕಾದ ಸಮಾಜ ಈ ಸಮುದಾಯವನ್ನು ಅತ್ಯಂತ ಕೀಳಿರಿಮೆಗಳಿಂದ ನೋಡುತ್ತಿದೆ. ಹೀಗಾಗಿ ನಾವು ಅವರೊಂದಿಗೆ ಇದ್ದೇವೆ ಎನ್ನುವ ಆತ್ಮಸ್ಥೆರ್ಯ ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ಎದ್ದು ನಿಂತು ಸ್ವಯಂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸೋಣ ಎಂದು ಸಾಮೂಹಿಕವಾಗಿ ಪ್ರತಿಜ್ಞಾವಿಧಿಯನ್ನು ಭೋದಿಸಿದರು.

Also read: ಅಲಕ್ಷಿತ ಸಮುದಾಯಗಳ ಹಕ್ಕುಗಳನ್ನು ಗೌರವಿಸಿ, ಅವಕಾಶ ನೀಡಿ: ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ

ಜೆಸಿಐ ಸವಿತಾ ರಮೇಶ್ ಮಾತಾನಾಡಿ, ಮಂಗಳಮುಖಿಯರಿಗೆ ಬದುಕುವ ಕಲೆ ತಿಳಿಸಿದರು. ಅಲ್ಲದೆ ಅವರನ್ನು ಹುರಿದುಂಬಿಸಿದರು. ಇತಿಹಾಸದ ಕಾಲಘಟ್ಟದಿಂದಲೂ ಶೋಷಣೆ ಎನ್ನುವುದು ಜೀವಂತವಾಗಿದೆ. ಈ ಶೋಷಣೆ ಮಂಗಳಮುಖಿಯರ ಮೇಲೆ ನಿರಂತರಗೊಳಿಸಿ ಅಸಡ್ಡೆ ಮಾಡಲಾಗುತ್ತಿದೆ. ಹೀಗಿದ್ದರೂ ಇದೇ ಸಮುದಾಯದವರು ಈ ಎಲ್ಲಾ ಶೋಷಣೆಗಳ ಮೀರಿ ಬದುಕಿ ಸಾಧಿಸಿದ್ದಾರೆ. ಎಲ್ಲಾ ರಂಗಗಳಲ್ಲಿಯೂ ಅಗ್ರಮಾನ್ಯ ಸ್ಥಾನವನ್ನು ಗಳಿಸುತ್ತಿದ್ದಾರೆ ಎಂದರು.

ಬಹುತೇಕ ಅನಕ್ಷರಸ್ಥರೇ ಇರುವ ಈ ಸಮುದಾಯಕ್ಕೆ ಉತ್ತಮ ತರಬೇತಿ, ಅರಿವು, ಪ್ರೋತ್ಸಾಹ, ಮೂಲಭೂತ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಹೋರಾಟ, ಸೇವೆ ನಡೆದಿದ್ದಾದರೆ ಮುಂದೊಂದು ದಿನ ಮಂಗಳಮುಖಿಯರು ಎಲ್ಲ ರಂಗಗಳಲ್ಲಿಯೂ ದರ್ಶಿಸಿಕೊಳ್ಳುತ್ತಾರೆ ಇದು ಆಗಬೇಕಿದೆ ನಮ್ಮ ಜೆಸಿಐ ಸಂಸ್ಥೆಗಳಿಂದ ಇಂತಹದೊಂದು ತರಬೇತಿಗಳನ್ನು ಮುಂದಿನ ದಿನಗಳಲ್ಲಿ ಅವರಿಗಾಗಿ ಮೀಸಲಾಗಿರುತ್ತದೆ ಎಂದು ತಿಳಿಸಿದರು.

ಮಂಗಳಮುಖಿಯರ ಕಾರ್ಯಕ್ರಮದ ನಂತರ ನೂತನ ಘಟಕ ಜೆಸಿಐ ಶಿವಮೊಗ್ಗ ಶ್ರೀರಕ್ಷೆಯ ಪದಗ್ರಹಣ ಜರುಗಿತು. ಪದಗ್ರಹಣದಲ್ಲಿ ನೂತನ ಅಧ್ಯಕ್ಷರಾಗಿ ಜೆಸಿ. ಅರ್ಜುನ್ ವಿ ಪಂಡೀತ್. ವಲಯಾಧ್ಯಕ್ಷರಾದ ಜೆಸಿ ದೀಪಿಕಾ ಎನ್ ಬಿದರಿಯವರಿಂದ ಪ್ರಮಾಣವಚನ ಸ್ವೀಕರಿಸಿದರು. ಇನ್ನುಳಿದ ನೂತನ ಜೆಸಿ ಸದಸ್ಯರಿಗೆ ವಲಯ ಉಪಾಧ್ಯಕ್ಷರಾದ ಜೆಸಿ.ಚೆನ್ನವೀರೆಶ್ ಹಾವಣಗಿಯವರು ಪ್ರಮಾಣವಚನ ಭೋದಿಸಿದರು.

ವೇದಿಕೆಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷರಾದ ಸೌಮ್ಯ ಅರಳಪ್ಪ ಮತ್ತು ಕಾರ್ಯದರ್ಶಿಗಳಾದ ಮಮತಾ ಶಿವಣ್ಣ,  ಜೆಜೆಸಿ ವಿಭಾಗದ ಅದ್ಯಕ್ಷರಾದ ಜೆಜೆಸಿ ನಿಶಾಂತ್ ಎಸ್ ಗಾರಾ, ವಲಯಾಧ್ಯಕ್ಷರಾದ ಜೆಸಿ ದೀಪಿಕಾ ಎನ್ ಬಿದರಿ, ನೋಮ್ ಕೋ-ಆರ್ಡಿನೇಟರ್ ಜೆಸಿಐ ಪಿಪಿಪಿ ಸವಿತಾ ರಮೇಶ್ , ವಲಯ ಉಪಾಧ್ಯಕ್ಷರಾದ ಜೆಸಿ ಚೆನ್ನವೀರೇಶ್ ಹಾವಣಗಿ, ಮುಖ್ಯ ಅತಿಥಿಗಳಾದ ಜೆಸಿಎಂ ಶ್ರೀಕಾಂತ್, ಸ್ಥಾಪಕ ಅಧ್ಯಕ್ಷರಾದ ಜೆಸಿ ಜ್ಯೋತಿ ಅರಳಪ್ಪ, ಪೂರ್ವ ವಲಯ ನಿರ್ದೇಶಕರಾದ ಜೆಸಿ ಗಾರಾ.ಶ್ರೀನಿವಾಸ್, ಐಪಿಪಿ ಜೆಸಿ ಮೋಹನ್. ಕಾರ್ಯಕ್ರಮದ ಪಿಡಿಯಾದ ಜೆಸಿ.ಸ್ವಪ್ನ ಸಂತೋಷ್ ಗೌಡ, ಜೆಸಿ ನವೀನ್ ತಲಾರಿ ಹಾಗೂ ನಗರದ ಎಂಟು ಸ್ಥಳೀಯ ಘಟಕಗಳ ಅಧ್ಯಕ್ಷರುಗಳು ಮತ್ತು ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಎಲ್ಲಾ ಜೆಸಿಗಳು ಸೇರಿದಂತೆ ಮಂಗಳಮುಖಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga Newsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share202Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಲಕ್ಷಿತ ಸಮುದಾಯಗಳ ಹಕ್ಕುಗಳನ್ನು ಗೌರವಿಸಿ, ಅವಕಾಶ ನೀಡಿ: ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ

Next Post

ಸೊರಬ: ಕರ್ತವ್ಯನಿರತ ಉಪತಹಶೀಲ್ದಾರ್ ಚನ್ನಕೇಶವ ಹೃದಯಾಘಾತದಿಂದ ಸಾವು

kalpa News

kalpa News

Next Post
ಸೊರಬ: ಕರ್ತವ್ಯನಿರತ ಉಪತಹಶೀಲ್ದಾರ್  ಚನ್ನಕೇಶವ ಹೃದಯಾಘಾತದಿಂದ ಸಾವು

ಸೊರಬ: ಕರ್ತವ್ಯನಿರತ ಉಪತಹಶೀಲ್ದಾರ್ ಚನ್ನಕೇಶವ ಹೃದಯಾಘಾತದಿಂದ ಸಾವು

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL