ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಫಲಾಪೇಕ್ಷೆ ಇಲ್ಲದೆ ಸೇವಾ ಮನೋಭಾವನೆ ಹಾಗೂ ನಾಯಕತ್ವದ ಗುಣಗಳನ್ನು ವೃದ್ಧಿಸುವಲ್ಲಿ ರೋಟರಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ರೋಟರಿ ನಾಯಕತ್ವ ಪ್ರಶಸ್ತಿ ಪ್ರಧಾನ, ರೋಟರಿ ಅಕಾಡೆಮಿ ಫಾರ್ ಹೈಯರ್ ಲೀಡರ್ಶಿಪ್ ಅವಾರ್ಡ್ (ರಹಲಾ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಗಳಿಸಲು, ಸಾಧನೆ ಮಾಡಲು ನಾಯಕತ್ವ ಗುಣ ಬಹಳ ಮುಖ್ಯ. ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ರೋಟರಿ ಸಂಸ್ಥೆಯಲ್ಲಿ ಕಲಿತ ಸೇವಾ ಮನೋಭಾವ, ನಾಯಕತ್ವದ ಗುಣ ತುಂಬಾ ಸಹಕಾರಿಯಾಗಿದೆ ಎಂದು ತಿಳಿಸಿದರು.
ಎಲ್ಲ ಸಂಘ ಸಂಸ್ಥೆಗಳಿAದ ರೋಟರಿ ಸಂಸ್ಥೆ ತುಂಬಾ ಭಿನ್ನವಾಗಿದೆ. ಸ್ನೇಹ, ಸೇವೆ ಹಾಗೂ ಓಡನಾಟಕ್ಕಾಗಿ ಸ್ಥಾಪಿತವಾದ ರೋಟರಿ ಸಂಸ್ಥೆ ಪ್ರಪಂಚಾದ್ಯAತ ನೂರಾರು ದೇಶಗಳಲ್ಲಿ ಅತ್ಯಂತ ಪ್ರಮುಖವಾದ ಸೇವೆಯ ಮುಖಾಂತರ ಜನ ಮಾನಸ ತಲುಪಿದೆ ಎಂದು ನುಡಿದರು.
ರೋಟರಿ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಮಾತನಾಡಿ, ಸಂಘ ಸಂಸ್ಥೆಗಳು ಯಶಸ್ವಿಯಾಗಿ, ಭದ್ರವಾಗಿ ನೂರಾರು ವರ್ಷಗಳ ಕಾಲ ನಡೆಯಬೇಕಾದರೆ ಒಳ್ಳೆಯ ನಾಯಕತ್ವದ ಗುಣ ಇರಬೇಕು. ಈ ನಿಟ್ಟಿನಲ್ಲಿ ಇಂತಹ ತರಬೇತಿಗಳು ರೋಟರಿ ಸದಸ್ಯರಲ್ಲಿ ಬೆಳಕು ಚೆಲ್ಲಿ ಅವರನ್ನು ರೋಟೆರಿಯನ್ ಆಗಿ ಪರಿವರ್ತನೆ ಮಾಡಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್ ಮಾತನಾಡಿ, ಬಹಳ ವರ್ಷಗಳ ನಂತರ ರಹಲ ಕಾರ್ಯಕ್ರಮ ಅತ್ಯಂತ ಹೆಚ್ಚು ಜನ ಸದಸ್ಯರ ನೋಂದಣಿಯೊAದಿಗೆ ಶಿವಮೊಗ್ಗದಲ್ಲಿ ದಾಖಲೆ ಮಾಡಿದೆ. ಶಿವಮೊಗ್ಗ ಸೆಂಟ್ರಲ್ ಕ್ಲಬ್ ಪದಾಧಿಕಾರಿಗಳು ಹಾಗೂ ಅಧ್ಯಕ್ಷರ ಪರಿಶ್ರಮದಿಂದ ಕಾರ್ಯಕ್ರಮ ಯಶಸ್ವಿಗೊಂಡಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಂಘಟನೆ ಹಾಗೂ ಬದ್ಧತೆ ಮುಖ್ಯ. ಸದಸ್ಯರ ಪ್ರಾಮಾಣಿಕ ಸಹಕಾರವು ಸಹ ಸಹಕಾರಿಯಾಗಿದೆ. ಆದ್ದರಿಂದ ಹೆಚ್ಚು ಹೆಚ್ಚು ಜನರು ರೋಟರಿ ಸಂಸ್ಥೆ ಸೇರಿಕೊಳ್ಳುವುದರ ಮುಖಾಂತರ ಸೇವೆ ಮಾಡುವ ಕೈಗಳನ್ನು ಬಲಪಡಿಸಿಬೇಕು ಮತ್ತು ನಾಯಕತ್ವ ಹಾಗೂ ಸಂಸ್ಕಾರದ ಗುಣಗಳನ್ನು ವೃದ್ಧಿಸಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಮಾತನಾಡಿ, ಕ್ಲಬ್ ಮಾಜಿ ಅಧ್ಯಕ್ಷರು, ಪಿಡಿಜಿ ಹಾಗೂ ವಲಯದ ಸಹಾಯಕ ಗವರ್ನರ್‌ಗಳ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂದು ತಿಳಿಸಿದರು.
ಜಿಲ್ಲಾ ಮಾಜಿ ಗವರ್ನರ್ ರಾಜಾರಾಮ್ ಭಟ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರಹಲಾ ಚೇರ್ಮನ್ ಚಂದ್ರಶೇಖರ್ ಮೆಂಡನ್, ವೈಸ್ ಚೇರ್ಮನ್ ಸಿಸಿ ಸಾವಿನ್, ವಲಯ ಹನ್ನೊಂದರ ಸಹಾಯಕ ಗವರ್ನರ್ ಸುರೇಶ್ ಎಚ್.ಎಂ., ಇವೆಂಟ್ ಚೇರ್ಮನ್ ರವಿ ಕೊಟೋಜಿ, ಜಿ.ಎನ್.ಪ್ರಕಾಶ್, ಈಶ್ವರ್, ಇವೆಂಟ್ ಕಾರ್ಯದರ್ಶಿ ರಮೇಶ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹಾಗೂ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಪ್ರಧಾನ ಭಾಷಣಕಾರರಾಗಿ ಸಿಸಿ ಪಾವಟೇ, ಡಾ ಕೆ ಶ್ರೀಪತಿ ಹಲಗುಂದ, ಎನ್.ಜಿ.ಉಷಾ, ನಾಯಕತ್ವ ಸಾಮರಸ್ಯ ಹಾಗೂ ಸಂಘ ಸಂಸ್ಥೆಗಳ ಓಡನಾಟ ಅಭಿವೃದ್ಧಿ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು, ಹಾಸನ, ಉಡುಪಿ ಹಾಗು ಶಿವಮೊಗ್ಗದಿಂದ 450ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post