ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಹಾನಗರ ಪಾಲಿಕೆ ಆದಾಗಲೇ ಇದೊಂದು ಮೂಲಭೂತ ಸೌಕರ್ಯ ಅಂತ ಪರಿಗಣಿಸಿ ಆದ್ಯತೆಯ ಮೇಲೆ ಈ ಕೆಲಸವಾಗಬೇಕಿತ್ತು. ಇರಲಿ . ಶಿವಮೊಗ್ಗ ನಗರ ವನ್ನು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿಸಿದಾಗಲಾದರೂ ಇದಕ್ಕೆ ಪ್ರಥಮ ಆದ್ಯತೆ ನೀಡಬೇಕಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ, ಚರಂಡಿ, ಯುಜಿಡಿ, ಭೂಗತ ಕೇಬಲ್ , ಬಸ್ ಸ್ಟಾಪ್ ಗಳು ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇದುವರೆಗೂ ಇದೊಂದು ಪ್ರಥಮ ಆಧ್ಯತೆ ಯ ಮೂಲಭೂತ ಸೌಕರ್ಯ ಅನಿಸುತ್ತಲೇ ಇಲ್ಲ

ಸಾರ್ವಜನಿಕ ಶೌಚಾಲಯ.
ಐದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ವಿವಿಧ ತಾಲ್ಲೂಕುಗಳಿಂದ ಕೆಲಸ ಕಾರ್ಯಗಳಿಗೆ ಬಂದುಹೋಗುವ, ಶಿವಮೊಗ್ಗ ಕ್ಕೆ ಬರುವ ಪ್ರವಾಸಿಗರಿಗೆ ಸಾರ್ವಜನಿಕ ಶೌಚಾಲಯದ ಕೊರತೆ ತೀವ್ರವಾಗಿ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರ ಪಾಡು ಹೇಳತೀರದು.

ಪುರುಷರ ಪಾಲಿಗೆ ನಗರದಲ್ಲಿರುವ ಕನ್ಸರ್ವೆಸ್ಸಿಗಳು ತಾತ್ಕಾಲಿಕ ಪರಿಹಾರದ ಕೇಂದ್ರ ವಾಗಿ ಬಳಸಲ್ಪಡುತ್ತಿದ್ದರೂ ಇತ್ತೀಚಿನ ಮುಚ್ಚಿದ ಚರಂಡಿ ವ್ಯವಸ್ಥೆ ಅವುಗಳನ್ನೂ ಬಳಸಲು ಮುಚ್ಚಲ್ಪಟ್ಟಿವೆ!

ವರ್ಷಾವಧಿ ಕಾಲ ತೆಗೆದುಕೊಳ್ಳುವ ಸ್ಮಾರ್ಟ್ ಸಿಟಿ ವಿವಿಧ ಕಾಮಗಾರಿಗಳಿಂದ ಮೂಲಭೂತ ಸೌಕರ್ಯ ಗಳನ್ನೇ ಅಡಚಣೆಯಾಗಿ ಅನುಭವಿಸುತ್ತಿರುವುದರ ಜೊತೆಗೆ ಸಾರ್ವಜನಿಕ ಶೌಚಾಲಯ ಕೊರತೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ!
ಇನ್ನಾದರೂ ಶಿವಮೊಗ್ಗ ನಗರ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ಗಮನಹರಿಸುವರೆ?
ತ್ಯಾಗರಾಜ ಮಿತ್ಯಾಂತ,
ಚೆನ್ನುಡಿ ಬಳಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post