ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮಾಂತರದ ಪಿಳ್ಳಂಗಿರಿಯ ಸರಕಾರಿ ಶಾಲೆಯನ್ಮು ರೌಂಡ್ ಟೇಬಲ್ ಇಂಡಿಯಾ 166 ಶಿವಮೊಗ್ಗ ಘಟಕ ಹಾಗೂ ದಾನಿಗಳ ಸಹಾಯದಿಂದ ಯುವ ಕೈಗಾರಿಕೋದ್ಯಮಿ ದಿ. ಶರತ್ ಭೂಪಾಳಂ ಅವರ ಸ್ಮರಣಾರ್ಥವಾಗಿ ಅಭಿವೃದ್ಧಿಗೊಳಿಸಿ ಶಾಲೆಗೆ ಶರತ್ ಭೂಪಾಳಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ನಾಮಕರಣ ಮಾಡಿ ಭಾನುವಾರ ಉದ್ಘಾಟನೆ ನೆರವೇರಿಸಲಾಯಿತು.
ನೂತನ ಕೊಠಡಿ ಹಾಗೂ ಶೌಚಾಲಯದ ಊದ್ಘಾಟನೆಯನ್ನು ನೂತನ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಧನಂಜಯ ಸರ್ಜಿ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ಶಶಿಧರ್ ಭೂಪಾಳಂ ಅವರು ನೆರವೇರಿಸಿದರು.
Also read: ನೂತನ ವಿಧಾನ ಪರಿಷತ್ ಸದಸ್ಯರಾಗಿ ಡಾ. ಧನಂಜಯ ಸರ್ಜಿ ಪ್ರಮಾಣ ವಚನ ಸ್ವೀಕಾರ
ವೇದಿಕೆಯಲ್ಲಿ ರೌಂಡ್ ಟೇಬಲ್ 13 ವಲಯದ ಅಧ್ಯಕ್ಷ ದೇವನಂದನ್, ಕಾರ್ಯದರ್ಶಿ ಶುಶ್ರುತ್, ಶಿವಮೊಗ್ಗ ರೌಂಡ್ ಟೇಬಲ್ 166ರ ಛೇರ್ಮನ್ ವಿಶ್ವಾಸ್ ಕಾಮತ್, ಕಾರ್ಯದರ್ಶಿ ಈಶ್ವರ್ ಸರ್ಜಿ, ಯೋಜನಾ ನಿರ್ದೇಶಕರಾದ ವಿನಯ್ ಟಿ.ಆರ್, ಪಿಳ್ಳಂಗಿರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸತೀಶ್, ಪಿಳ್ಳಂಗಿರಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಗಣೇಶ್ , ಶಾಲೆಯ ಮುಖ್ಯೋಪಾಧ್ಯಾಯರಾದ ವಿಶಾಲಾಕ್ಷಿ ಎಸ್.ಎನ್, ಸಂಗೀತ ಭೂಪಾಳ , ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















