ಬದುಕಿಗೆ ಅನೇಕ ಅನುಭವಗಳನ್ನು ನೀಡುವ ಸಾಮಾಜಿಕ ಅಧ್ಯಯನಗಳನ್ನು ವಿದ್ಯಾರ್ಥಿಗಳು ನಿರಂತರವಾಗಿ ಅಳವಡಿಸಿಕೊಳ್ಳಿ ಎಂದು ಪ್ರಾಂತೀಯ ರಾಷ್ಟ್ರೀಯ ಸೇವಾ ಯೋಜನೆ NSS ನಿರ್ದೇಶನಾಲಯದ ನಿರ್ದೇಶಕರಾದ ಡಾ.ವೈ.ಎಂ. ಉಪ್ಪಿನ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ATNCC ಕುವೆಂಪು ವಿಶ್ವವಿದ್ಯಾಲಯ, Kuvempu University ರಾಷ್ಟ್ರೀಯ ಶಿಕ್ಷಣ ಸಮಿತಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಏಳು ದಿನಗಳ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಶಿಬಿರದಲ್ಲಿ ಸಮಾರೋಪ ಮಾತುಗಳನ್ನಾಡಿದರು.
Also read: ಚಂದ್ರಯಾನ-3 ಯಶಸ್ಸು ಅತ್ಯಂತ ಮಹತ್ವದ ಸಾಧನೆ: ಪ್ರಧಾನಿ ನರೇಂದ್ರ ಮೋದಿ
ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, ಮನುಷ್ಯ ಮನುಷ್ಯತ್ವದೊಂದಿಗೆ ಬದುಕುವುದನ್ನು ಮರೆತಿದ್ದಾನೆ. ಅಂತಹ ಮನುಷ್ಯತ್ವದ ಸೌಜನ್ಯತೆ ಪಡೆಯಲು ಹಾಗೂ ವ್ಯಕ್ತಿತ್ವ ಪರಿಪೂರ್ಣಗೊಳಿಸಲು ಇಂತಹ ಶಿಬಿರ ಅದ್ಭುತ ವೇದಿಕೆಯಾಗಿದೆ.
ಕುವೆಂಪು ವಿಶ್ವವಿದ್ಯಾಲಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಮಾತನಾಡಿ, ಶಿಬಿರಗಳಲ್ಲಿ ಕಲಿತ ಮೌಲ್ಯಗಳ ಮೂಲಕ ದೇಶಕ್ಕೆ ಉತ್ತಮ ರಾಜಕಾರಣಿ ಅಧಿಕಾರಿಗಳಾಗುವ ಸಾಮರ್ಥ್ಯವನ್ನು ಶಿಬಿರ ನೀಡಲಿದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post