ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ವ್ಯಾಪ್ತಿಯ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಈಚೆಗೆ ನಡೆದ ಕುವೆಂಪು ವಿಶ್ವವಿದ್ಯಾಲಯದ 2019-20 ನೆಯ ಸಾಲಿನ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ವಿವಿಧ ರ‍್ಯಾಂಕ್’ಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ತಿಳಿಸಿದರು.
ಈ ಕುರಿತಂತೆ ಮಾತನಾಡಿದ ಅವರು, ಹಲವು ವರ್ಷಗಳಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕಲೆ, ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ತಮ ರ‍್ಯಾಂಕ್’ಗಳನ್ನು ಪಡೆಯುತ್ತಿರುವುದು ಅಭಿನಂದನಾರ್ಹ ವಿಚಾರವಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ, ಭೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಎನ್’ಇಎಸ್ ಪರವಾಗಿ ತುಂಬು ಹೃದಯದ ಅಭಿನಂದನೆ ತಿಳಿಸಿದರು.
ಕಾಲೇಜಿನ ಹೆಸರು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಹೆಸರು
ಎನ್’ಇ.ಎಸ್ ಅಡ್ವಾನ್ಸ್ ಸ್ಟಡೀಸ್ ಕಾಲೇಜು: (ಬಿಕಾಂ ಪದವಿಯಲ್ಲಿ)- ನವ್ಯ ಕೆ. ನಾಯಕ್ (1 ನೇ ರ‍್ಯಾಂಕ್), ಪೂಜಾ ಜೈನ್ (6 ನೇ ರ‍್ಯಾಂಕ್), ಬಿ.ಎಂ. ಸುಶ್ಮಿತಾ (7 ನೇ ರ‍್ಯಾಂಕ್), ಕೆ.ಎಸ್.ಅನಘಾ, (9 ನೇ ರ‍್ಯಾಂಕ್).
ಎಸ್’ಆರ್’ಎನ್’ಎಂ ಕಾಲೇಜು: (ಬಿಸಿಎ ಪದವಿಯಲ್ಲಿ)-ಮೇಘ ಪಿ. ಪಾರ್ವತಿಕರ್ (3 ನೇ ರ‍್ಯಾಂಕ್), ಎಸ್.ಆರ್. ವಿದ್ಯಾಶ್ರೀ (6 ನೇ ರ‍್ಯಾಂಕ್), ಕೆ.ಪಿ. ಪಲ್ಲವಿ(7 ನೇ ರ‍್ಯಾಂಕ್).
ಎಟಿಎನ್’ಸಿ ಕಾಲೇಜು:(ಬಿ.ಕಾಂ ಪದವಿಯಲ್ಲಿ)- ಎಂ. ಆದಿತ್ಯ (2 ನೇ ರ‍್ಯಾಂಕ್), ನಿಕಿತಾ ಆರ್. ಶೆಟ್ಟಿ (3 ನೇ ರ‍್ಯಾಂಕ್), ಬಿ.ಎನ್. ಕೀರ್ತಿ (10 ನೇ ರ‍್ಯಾಂಕ್).
(ಬಿಬಿಎ ಪದವಿಯಲ್ಲಿ)-ಎಚ್.ಎನ್. ಸ್ಪೂರ್ತಿ (1 ನೇ ರ‍್ಯಾಂಕ್), ವಿ. ಪೂಜಾ (2 ನೇ ರ‍್ಯಾಂಕ್), ಕೆ. ಸುಷ್ಮಾ(6 ನೇ ರ‍್ಯಾಂಕ್), ಕೆ. ರಕ್ಷಿತಾ (10 ನೇ ರ‍್ಯಾಂಕ್).
ಕಡಿದಾಳ್ ಮಂಜಪ್ಪ ನ್ಯಾಷನಲ್ ಇನ್ಸ್ಟಿಟ್ಯೂಟ್‌ಆಫ್ ಪೋಸ್ಟ್ ಗ್ರಾಜ್ಯುಯೇಷನ್: (ಎಂಕಾಂ ಸ್ನಾತ್ತಕೊತ್ತರ ಪದವಿಯಲ್ಲಿ)-ವಿ. ವೈಭವಿ (9 ನೇ ರ‍್ಯಾಂಕ್)
ಕಮಲಾ ನೆಹರು ಕಾಲೇಜು: (ಬಿ.ಎ ಪದವಿಯಲ್ಲಿ)-ವೈ.ಡಿ. ದೀಪಾ (9 ನೇ ರ‍್ಯಾಂಕ್).
ರಾಷ್ಟ್ರೀಯ ಶಿಕ್ಷಣ ಸಮಿತಿಗೆ 75 ರ ಸಂಭ್ರಮ
1946 ರಲ್ಲಿ ಶಿವಮೊಗ್ಗದ ಸ್ವಾತಂತ್ರ ಹೋರಾಟಗಾರರಿಂದ ಸ್ಥಾಪನೆಗೊಂಡ ರಾಷ್ಟ್ರೀಯ ಶಿಕ್ಷಣ ಸಮಿತಿಗೆ 75 ನೆಯ ವರ್ಷ ಪೂರೈಸುತ್ತಿದ್ದು ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್. ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್. ಅಶ್ವತ್ಥ್ ನಾರಾಯಣ ಶೆಟ್ಟಿ, ಖಜಾಂಚಿಗಳಾದ ಸಿ.ಆರ್. ನಾಗರಾಜ, ಕುಲಸಚಿವರಾದ ಪ್ರೊ.ಟಿ.ಎಸ್.ಹೂವಯ್ಯಗೌಡ, ಎನ್.ಇ.ಎಸ್ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಎಸ್. ಶಿವಪ್ರಸಾದ್, ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ಎನ್. ಶಂಕರ್,ಕಡಿದಾಳ್ ಮಂಜಪ್ಪ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೇಟ್ ಸ್ಟಡೀಸ್ ಕಾಲೇಜಿನ ನಿರ್ದೇಶಕರಾದ ವೆಂಕಟರಾಜು, ಎಸ್‌ಆರ್‌ಎನ್‌ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ, ಎ.ಟಿ.ಎನ್.ಸಿ.ಸಿ ಕಾಲೇಜಿನ ಪ್ರಾಂಶುಪಾಲರಾದ ಎೆಚ್.ಎಂ.ಸುರೇಶ್, ಎನ್.ಇ.ಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post