ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸತ್ ಅಧಿವೇಶನದ ಸಮಯವನ್ನು ವಿಪಕ್ಷ ನಾಯಕರು ವಿನಾಕಾರಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸತ್ ನಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳನ್ನು ಚರ್ಚೆ ಮಾಡಬೇಕಿತ್ತು. ಆದರೆ, ಯಾವುದೇ ವಿಷಯಗಳು ಚರ್ಚೆಯಾಗಲಿಲ್ಲ. ಚರ್ಚೆಯಲ್ಲಿ ಭಾಗವಹಿಸಬೇಕೆಂದು ಸ್ಪೀಕರ್ ಮನವಿ ಮಾಡಿದರೂ ಕೂಡ ವಿಪಕ್ಷಗಳು ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹಾಗಾಗಿ ಅಧಿವೇಶನದ ಸಮಯ ವ್ಯರ್ಥವಾಯಿತು. ಯಾವುದೇ ಬಿಲ್ ಗಳು ಕೂಡ ಪಾಸ್ ಆಗಲಿಲ್ಲ ಎಂದರು.
Also read: ಬಿಜೆಪಿಯವರಿಂದ ರಾಜಕೀಯ ಇಬ್ಬದಿನೀತಿ ಪಾಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಮಧ್ಯ ಸಂಸದರ ಸಭೆ ಕೂಡ ಆಗಿದೆ. ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆ ಕುರಿತು ಚರ್ಚೆ ಮಾಡಲಾಗಿದೆ. ಶೀಘ್ರದಲ್ಲಿಯೇ ರಾಜ್ಯದ ಬಿಜೆಪಿಯಲ್ಲಿರುವ ಎಲ್ಲಾ ಗೊಂದಲಗಳು ನಿವಾರಣೆಯಾಗುತ್ತವೆ. ಕೆಲವು ಗೊಂದಲಗಳ ಹೇಳಿಕೆಯಿಂದ ಕಾರ್ಯಕರ್ತರಿಗೆ ನೋವಾಗಿರುವುದು ನಿಜ. ಆದಷ್ಟು ಬೇಗ ಹೈಕಮಾಂಡ್ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ರಾಜ್ಯದ ಸಂಸದರೆಲ್ಲಾ ವರಿಷ್ಠರಿಗೆ ಮನವಿ ಮಾಡಿದ್ದೇವೆ. ವಾತಾವರಣ ತಿಳಿಯಾಗುತ್ತದೆ ಎಂಬ ನಂಬಿಕೆ ನಮಗಿದೆ ಎಂದರು.
ಬಿಜೆಪಿ ವಕ್ಫ್ #Wakf ವಿಚಾರವನ್ನು ಮುಂದಿಟ್ಟುಕೊಂಡು ಈಗಾಗಲೇ ಹೋರಾಟ ಮಾಡಿದ್ದೇವೆ. ಇದನ್ನು ಮತ್ತೆ ಮುಂದುವರೆಸುತ್ತೇವೆ. ಐಲ್ಯಾಂಡ್ ಗೆ ಐಲ್ಯಾಂಡೇ ನಮ್ಮದು ಎಂದು ಹೇಳುವ ಮಟ್ಟಕ್ಕೆ ವಕ್ಫ್ ಬೋರ್ಡ್ ಬಂದಿದೆ. ಇದರ ವಿರುದ್ಧ ಬಿಜೆಪಿ ಮತ್ತೆ ದೊಡ್ಡ ಹೋರಾಟ ಆರಂಭಿಸುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ #CM Siddaramaiah ವಿರುದ್ಧ ಇಡಿ ಮಧ್ಯಪ್ರವೇಶ ಮಾಡಿರುವುದು ಕಾನೂನಾತ್ಮಕವಾಗಿಯೇ ಇದೆ. ಆದರೆ, ಮುಖ್ಯಮಂತ್ರಿಗಳು ಮಾತ್ರ ಇದನ್ನು ಒಪ್ಪದೇ ಹಾಸ್ಯಾಸ್ಪದ ಮಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಸಂಸ್ಕøತಿಯೇ ಹಾಗೆ. ಒಂದು ಹಗರಣವನ್ನು ಮುಚ್ಚಲು ಬೇರೆ ವಿಷಯದ ಬಗ್ಗೆ ಮಾತನಾಡುತ್ತಾರೆ. ಈಗ ಮುಡಾ ಹಗರಣ ಮರೆ ಮಾಚಲು ಸಮಾವೇಶ ಮಾಡುತ್ತಿದ್ದಾರೆ ಎಂದು ಗೇಲಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post