ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೃಹಿಣಿಯರು ಮನೆಯಿಂದ ಹೊರಬಂದು ಉದ್ಯಮದತ್ತ ಸಾಗುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಯೂತ್ ಹಾಸ್ಟೆಲ್ ನ ರಾಷ್ಟ್ರೀಯ ಅಧ್ಯಕ್ಷ ವೆಂಕಟನಾರಾಯಣ ನುಡಿದರು.
ಸ್ವೇದ ಮಹಿಳಾ ಉದ್ಯಮಿಗಳ ಸಂಘ, ಮಥುರಾ ಪ್ಯಾರಡೈಸ್ ಮುಂಭಾಗದ ಪ್ರವಾಸಿ ಕಾರಿನ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸ್ವೇದ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಉದ್ಯಮಕ್ಕೆ ಪ್ರೋತ್ಸಾಹ ಕೊಡುವ ಇಂತ ಕಾರ್ಯಕ್ರಮಗಳು ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಯೂತ್ ಹಾಸ್ಟೆಲ್ ನ ರಾಜ್ಯ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ರವಿ ಕುಮಾರ್, ವಾಗೀಶ್, ಡಾ. ಅರವಿಂದ್, ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ. ಲಕ್ಷ್ಮಿದೇವಿ ಗೋಪಿನಾಥ್, ನಿರ್ದೇಶಕಿ ಸಹನಾ ಚೇತನ್ ಮತ್ತು ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದರು.
Also read: ಹೊಸ ಅತಿಥಿಯ ಆಗಮನದ ಖುಷಿಯಲ್ಲಿ ನಟಿ ಆಲಿಯಾ ಭಟ್…

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















