ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ಪರ್ಫೆಕ್ಟ್ ಅಲಾಯ್ ಕಾರ್ಖಾನೆ ಕಾರ್ಮಿಕರು ಕೆ.ಎಸ್. ಈಶ್ವರಪ್ಪ #K S Eshwarappa ರವರಿಗೆ ಬಿಳಿ ಕಮಲ ನೀಡಿ ಶುಭ ಹಾರೈಸಿದರು.
ಮತ ಯಾಚನೆ ನಿಮಿತ್ತ ಪರ್ಫೆಕ್ಟ್ ಅಲಾಯ್ ಕಾರ್ಖಾನೆಗೆ ಭೇಟಿ ನೀಡಿದ ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಕಾರ್ಖಾನೆ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿದರು.

Also read: ಮಂಡ್ಯದಲ್ಲಿ ಸುಮಲತಾ ಕೋ-ಆಪರೇಟ್ ಮಾಡ್ತಿಲ್ಲ | ಮಾಜಿ ಪ್ರಧಾನಿ ದೇವೇಗೌಡ ಆಕ್ರೋಶ
ಪರ್ಫೆಕ್ಟ್ ಅಲಾಯ್ ಕಾಂಪೊನೆಂಟ್ ನಿರ್ದೇಶಕರಾದ ಬಿ.ಸಿ. ನಂಜುಂಡ ಶೆಟ್ಟಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ನಾವು ಇಲ್ಲಿಯವರೆಗೂ ಬಿಜೆಪಿಗೆ ಮತ ನೀಡುತ್ತಾ ಬಂದಿದ್ದೇವೆ ಆದರೆ ಈ ಬಾರಿ ಕೆ.ಎಸ್. ಈಶ್ವರಪ್ಪ ಅವರಿಗೆ ಮತ ಹಾಕೋಣ ನೀವು ಸಹ ನಿಮ್ಮ ಅಕ್ಕಪಕ್ಕದ ಮನೆ ಸ್ನೇಹಿತರ ಬಳಿ ತೆರಳಿ ಈಶ್ವರಪ್ಪ ರವರಿಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳಿ ಎಂದರು.
ಈಶ್ವರಪ್ಪ ಪರ ಪ್ರಚಾರಕ್ಕೆ ಒಂದು ದಿನ ರಜೆ ಘೋಷಣೆ ಇಂದು ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ನಗರದ ಅನೇಕ ವಾಹನಗಳ ಶೋರೂಂಗೆ ತೆರಳಿ ಮತ ಯಾಚನೆ ಮಾಡಿದರು.

ಈಶ್ವರಪ್ಪ ರವರ ಮನವಿ ಸ್ಪಂಧಿಸಿದ ಪರ್ಫೆಕ್ಟ್ ಅಲಾಯ್ ಕಾರ್ಖಾನೆ, ಆರ್ಯ ಟಿವಿಎಸ್, ಕಾರ್ತಿಕ್ ಹೀರೋ ಶೋರೂಂ, ಪ್ರಭು ಮೋಟಾರ್ಸ್, ಮಂಹತಾ ಶೋರೂಂ, ರಾಹುಲ್ ಹುಂಡೈ, ಆದಿಶಕ್ತಿ ಕಾರ್ಸ್, ಮಾರುತಿ ಶೋರೂಮ್ ಗಳ ಮಾಲೀಕರು ನಿಮ್ಮ ಪ್ರಚಾರ ಮಾಡಲು ಕಾರ್ಮಿಕ ಹಾಗು ಸಿಬ್ಬಂದಿಗಳಿಗೆ ಒಂದು ದಿನದ ರಜೆ ಕೊಡುವುದಾಗಿ ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post