ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದಿಟ್ಟ, ನಿರ್ಭೀತ ಪತ್ರಿಕೋದ್ಯಮ ಅಡಳಿತದ ಲೋಪ ದೋಷಗಳನ್ನು ಎತ್ತಿ ಹಿಡಿಯುತ್ತಾ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಮಾಡುವ ಶ್ರಮ ಶ್ಲಾಘನೀಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆಯಡಿ ಪತ್ರಿಕಾ ಸಂಪಾದಕರುಗಳಿಗೆ ಲ್ಯಾಪ್ ಟಾಪ್ ವಿತರಿಸುವ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿರು.
ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕೆಗಳ ಕಾರ್ಯ ನೆನೆದ ಅವರು, ಸಮಾಜದ, ಆಡಳಿತ ವ್ಯವಸ್ಥೆ ಬಗ್ಗೆ ನೇರವಾಗಿ ಎಚ್ಚರಿಕೆ ನೀಡುತ್ತಾ, ರೈತರು, ಕಾರ್ಮಿಕರು, ನೊಂದವರು ಹೀಗೆ ಸಮಾಜದ ಅನೇಕ ಸ್ಥರದ ಜನರ ಆಗು ಹೋಗುಗಳ ಬಗ್ಗೆ ತಿಳಿಸುವ ಪತ್ರಿಕೆಗಳ ಮತ್ತು ಮಾಧ್ಯಮಗಳ ಪಾತ್ರ ಹಿರಿದಾಗಿದೆ. ಇವರು ಸಮಾಜಕ್ಕೆ ನೀಡುವ ಕೊಡುಗೆ ಅಪಾರ ಎಂದರು.
ಮೇಯರ್ ಸುವರ್ಣ ಶಂಕರ್ ಮಾತನಾಡಿ, ಪತ್ರಕರ್ತರ ಹಿತಕ್ಕಾಗಿ ನಾವು ಈ ಕಾರ್ಯ ಮಾಡಿದ್ದು ಮುಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮದವರಿಗೂ ಲ್ಯಾಪ್ ಟಾಪ್ ನೀಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಉಪಮೇಯರ್ ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ಜ್ಞಾನೇಶ್ವರ್, ಯು.ಎಚ್. ವಿಶ್ವನಾಥ್, ವಿಶ್ವಾಸ್, ಚನ್ನಬಸಪ್ಪ, ಯೋಗೇಶ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post