ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ತಾಲ್ಲೂಕು, ಕುಂಸಿ ಗ್ರಾಮದ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಪೂರೈಸುವ 110/11ಕೆವಿ ವಿದ್ಯುತ್ ಮಾರ್ಗದ ನಿರ್ವಹಣೆ ಕಾರ್ಯ ಹಾಗೂ ತುರ್ತು ಕಾಮಗಾರಿ ಇರುವುದರಿಂದ ಸೆ. 21ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಕುಂಸಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಹಳ್ಳಿಗಳಾದ ಕುಂಸಿ, ಬಾಳೆಕೊಪ್ಪ, ಚೋರಡಿ, ತುಪ್ಪೂರು, ಕೋಣೆಹೂಸೂರು, ಹೊರಬೈಲು ಇನ್ನಿತರೆ ಸುತ್ತಮುತ್ತಲ ಹಳ್ಳಿಗಳು ಹಾಗೂ ಹಾರ್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ ಹಾಗೂ ಇನ್ನಿತರೆ ಸುತ್ತಮುತ್ತಲ ಗ್ರಾಮಗಳು ಹಾಗೂ ಆಯನೂರು, ಮಂಡಘಟ್ಟ , ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಇಂದಿರಾನಗರ ಬಡಾವಣೆ ಇನ್ನಿತರೆ ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








