ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ Madhu Bangarappa ಅವರೇ, ನೀವು ಚೇಲಾಗಳು ಎಂದು ಕರೆದ ಇದೇ ಬಿಜೆಪಿ ಕಾರ್ಯಕರ್ತರೇ ನಿಮಗೆ ಹಿಂದೊಂದು ದಿನ ಚುನಾವಣೆಯಲ್ಲಿ ದುಡಿದಿದ್ದು ಎಂಬುದು ಮರೆತುಹೋಯಿತೇ? ಇದು ಸಂಸದ ಬಿ.ವೈ. ರಾಘವೇಂದ್ರ B Y Raghavendra ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಚಾಟಿ ಬೀಸಿದ ಪರಿ…
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಮ್ಮ ಕಾರ್ಯಕರ್ತರನ್ನು ಚೇಲಾಗಳು ಎಂದು ಕರೆದಿದ್ದೀರಿ. ಹಿಂದೆ ನೀವು ನಮ್ಮ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇದೇ ಕಾರ್ಯಕರ್ತರೇ ನಿಮಗಾಗಿ ದುಡಿದಿದ್ದು. ಈಗ ಅದೇ ಕಾರ್ಯಕರ್ತರನ್ನು ಚೇಲಾಗಳು ಎನ್ನುತ್ತೀರಾ ಎಂದು ಕಿಡಿ ಕಾರಿದರು.
ಹಿಂದೆ ಜೆಡಿಎಸ್’ನಿಂದಲೂ ಸಹ ನೀವು ಸ್ಪರ್ಧಿಸಿದಾಗ ಕುಮಾರಣ್ಣ H D Kumaraswamy ನನ್ನ ತಂದೆ, ದೇವೇಗೌಡರು Devegowda ನಮ್ಮ ದೇವರು ಎಂದಿದ್ದಿರಿ. ಆದರೆ ಈಗ ಅವರ ಬಗ್ಗೆಯೇ ಹಗುರವಾಗಿ ಮಾತನಾಡುತ್ತೀರಿ ಎಂದು ಚಾಟಿ ಬೀಸಿದರು.
ನಿಮ್ಮ ಈ ಮಾತುಗಳಿಂದ ನಿಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೇ ಮುಜುಗರು ಉಂಟಾಗುತ್ತಿದೆ. ಈ ಬಗ್ಗೆ ನಿಮ್ಮವರೇ ಹಲವರು ನನಗೆ ಕರೆ ಮಾಡಿ ಹೇಳಿದ್ದಾರೆ ಎಂದರು.
Also read: ಸನ್ಮಾನ ಮಾಡುವುದರಿಂದ ಮಹಿಳಾ ವ್ಯಕ್ತಿತ್ವಗಳಿಗೆ ಮನ್ನಣೆ ನೀಡಿದಂತಾಗಿದೆ : ಜೆಸಿ ಡಾ. ವಿಜಯಶ್ರೀ
ದೇಶದ ಪ್ರಧಾನಿ ಮೋದಿ PM Modi ಅವರ ಬಗ್ಗೆಯೂ ಸಹ ನೀವು ಹಗುರವಾಗಿ ಮಾತನಾಡುತ್ತೀರಿ. ಸ್ವತಂತ್ರ ಬಂದ ಸುಮಾರು 68 ವರ್ಷ ನಿಮ್ಮ ಪಕ್ಷವೇ ಆಡಳಿತ ನಡೆಸಿದೆ. ಆದರೆ, ಕೇವಲ 10 ವರ್ಷದ ಆಡಳಿತದಲ್ಲಿ ನೀವುಗಳು ತಲೆ ತಗ್ಗಿಸುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಮೋದಿಯವರ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತೀರಿ ಎಂದು ಕಿಡಿ ಕಾರಿದರು.
ನಾವು ನಮ್ಮ ಅಭಿವೃದ್ಧಿ ಕೆಲಸಗಳನ್ನು ಶ್ವೇತ ಪತ್ರ ಹೊರಡಿಸಿ ಜನರಿಗೆ ಮುಟ್ಟಿಸಿದ್ದೇವೆ ನೀವು ಏನು ಮಾಡಿದ್ದೀರಿ ಉತ್ತರ ಕೊಡಿ ಎಂದು ಸವಾಲು ಹಾಕಿದ ಅವರು, ಶರಾವತಿ ಸಂತ್ರಸ್ಥರ ಬಗ್ಗೆ ಅವಮಾನವಾಗುವ ರೀತಿ ಮಾತನಾಡುತ್ತೀರಿ. ನೀವು ಮಾಡಿರುವ ತಪ್ಪಿನಿಂದ ಸಮಸ್ಯೆ ಹಾಗೆ ಉಳಿದಿದೆ. ಸಂಸತ್ ಸದನದಲ್ಲಿ ಶರಾವತಿ ಸಮಸ್ಯೆ ಬಗ್ಗೆ ನಾವು ಧ್ವನಿ ಎತ್ತಿರುವ ಬಗ್ಗೆ ಪತ್ರಿಕೆ ಮಾಧ್ಯಮದಲ್ಲಿ ಪ್ರಕಟವಾಗಿದೆ. ನನ್ನ ಕರ್ತವ್ಯ ನಾನು ಮಾಡಿದ್ದೇನೆ ಎಂದರು.
ನಿಮ್ಮ ತಪ್ಪಿನ ಪ್ರತಿಫಲಕ್ಕೆ ಶರಾವತಿ ಸಂತ್ರಸ್ಥರ ಸಮಸ್ಯೆ ಹಾಗೆ ಉಳಿದಿದೆ. ಸಮಸ್ಯೆ ಹಾಗೆ ಉಳಿಸಿಕೊಂಡು ರಾಜಕಾರಣ ಮಾಡುವ ನೀವು ನಿಮ್ಮಿಂದ ನಾವು ಕಲಿಯಬೇಕಾ ಎಂದರು.
ಎಂಪಿಎಂ MPM ಕಾರ್ಖಾನೆಯನ್ನು ಮುಚ್ಚಿದ್ದು ಯಾರು ಎಂದು ಪ್ರಶ್ನಿಸಿದ ಅವರು, ಮುಚ್ಚಿ ಹೋಗಬೇಕಿದ್ದ ವಿಐಎಸ್’ಎಲ್ VISL ಕಾರ್ಖಾನೆಯನ್ನು ಪ್ರಯತ್ನಪಟ್ಟು ಉಳಿಸಿಕೊಂಡಿದ್ದು ನಾವು. ಅಲ್ಲದೇ, ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಮುಚ್ಚಲು ಬಿಡುವುದಿಲ್ಲ. ಕಾರ್ಖಾನೆಯ ಕಾರ್ಮಿಕರ ಕೆಲಸವನ್ನು 25 ದಿನಕ್ಕೆ ಹೆಚ್ಚಿಸಿದ್ದೇನೆ. ಇದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post