ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಸ್’ಎಸ್’ಎಲ್’ಸಿ ಫಲಿತಾಂಶದಲ್ಲಿ SSLC Result ಜಿಲ್ಲೆಗೆ ಎ’ ಶ್ರೇಣಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಜಿಲ್ಲೆಯ 11 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳಿಸಿದ್ದಾರೆ. ಶಿವಮೊಗ್ಗದ ಐವರು ಭದ್ರಾವತಿಯ ಇಬ್ಬರು. ಸೊರಬ, ಸಾಗರ ಶಿಕಾರಿಪುರ, ಹಾಗೂ ತೀರ್ಥಹಳ್ಳಿಯ ತಲಾ ಒಬ್ಬರು 625ಕ್ಕೆ 625 ಅಂಕ ಪಡೆದಿದ್ದಾರೆ.
ಈ ಸಾಧನೆ ಮಾಡಿದ 11 ವಿದ್ಯಾರ್ಥಿಗಳು ನಗರ ಹಾಗೂ ಪಟ್ಟಣ ಪ್ರದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ಆಗಿದ್ದರೆ, ಈ ಸಾಧನೆ ಮಾಡಿದ 11 ಮಂದಿಯಲ್ಲಿ 10 ವಿದ್ಯಾರ್ಥಿನಿಯರು ಇರುವುದು ವಿಶೇಷ.
ಜಿಲ್ಲೆಯ 87 ಶಾಲೆಗಳಿಗೆ ಶೇ.100 ಫಲಿತಾಂಶ ದೊರೆತಿದ್ದು 35 ಸರ್ಕಾರಿ, 49 ಅನುದಾನ ರಹಿತ 4 ಅನುದಾನಿತ ಶಾಲೆಗೆ ಶೇ.100 ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದ 23,136 ವಿದ್ಯಾರ್ಥಿಗಳ ಪೈಕಿ 19,574 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಒಟ್ಟು ಶೇ.84.60 ಫಲಿತಾಂಶ ಲಭಿಸಿದೆ. ತೀರ್ಥಹಳ್ಳಿ ತಾಲೂಕು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದರೆ, ಶಿಕಾರಿಪುರ ಕೊನೆಯ ಸ್ಥಾನದಲ್ಲಿದೆ.
ರಾಮಕೃಷ್ಣ ವಿದ್ಯಾನಿಕೇತನ ಭೂಮಿಕಾ ಟಾಪರ್:
ಶಿವಮೊಗ್ಗದ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನದ ಎಸ್’ಎಸ್’ಎಲ್’ಸಿ ವಿದ್ಯಾರ್ಥಿನಿ ಭೂಮಿಕ ಸಿ.ಆರ್.ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
625ಕ್ಕೆ 625 ಅಂಕಗಳಿಸಿರುವ ಭೂಮಿಕ ಅವರು ಹಿರೆಕೆರೂರು ಮೂಲದವರು ಇದೇ ಶಾಲೆಯ ಮುರುಳೀ ಎಲ್.ವಿ. ಹಾಗೂ ಅಲೋಕ್ ಜಿ.ಎಸ್. ಅವರು 624 ಅಂಕಗಳಿಸಿದ್ದು, ರಾಜ್ಯದ ಟಾಪರ್ 2 ಆಗಿದ್ದಾರೆ. ಹಾಗೆಯೇ ಸುಮಂತ್ ಗೌಡ ಎ.ಜಿ. ಅವರು 623 ಅಂಕಗಳಿಸಿ ರಾಜ್ಯದ ಟಾಪರ್ 3 ಆಗಿದ್ದಾರೆ.
ಶೇ.100ರಷ್ಟು ಫಲಿತಾಂಶ ಪಡೆದಿರುವ ರಾಮಕೃಷ್ಣ ವಿದ್ಯಾನಿಕೇತನವು ಇಷ್ಟು ವರ್ಷಗಳ ತನ್ನ ಶೇ.100 ಪರಂಪರೆಯನ್ನು ಉಳಿಸಿಕೊಂಡಿದೆ. 600ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೇ ಆಗಿದ್ದಾರೆ. ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ರಾಮಕೃಷ್ಣ ಶಾಲೆಯ ಅಧ್ಯಕ್ಷ ನಾಗೇಶ್ ಹಾಗೂ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.
ಶಿವಮೊಗ್ಗ ಅಶೋಕ ನಗರದ ಅನನ್ಯ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸುದೇಶ್ ಹಾಗೂ ಅಂಬಿಕಾ ದಂಪತಿಗಳ ಪುತ್ರಿ ಎನ್.ಎಸ್. ಮಂಜೂಷಾ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ 614 ಅಂಕ ಪಡೆದಿದ್ದಾರೆ. ಸಮಾಜ ವಿಜ್ಞಾನ ಹಾಗೂ ಕನ್ನಡದಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿರುವುದು ವಿಶೇಷ. ಮಂಜೂಷಾ ಅವರಿಗೆ ಮಾನವಹಕ್ಕುಗಳ ಕಮಿಟಿಯ ಪದಾಧಿಕಾರಿ ಆಟೋ ರವಿ ಹಾಗೂ ಇತರರು ಅಭಿನಂದಿಸಿದ್ದಾರೆ.
ಗಾಡಿಕೊಪ್ಪದ ಗಿರಿದೀಪಮ್ ಆಂಗ್ಲಪ್ರೌಢ ಶಾಲೆಯಲ್ಲಿ ಪರೀಕ್ಷೆ ಬರೆದ ಸಿದ್ಲಿಪುರದ ಉಮೇಶ್ ಹಾಗೂ ಅನಿತಾ ದಂಪತಿಗಳ ಪುತ್ರಿ ತನುಶ್ರೀ ಎಂ.ಯು. ಅವರು 608 ಅಂಕ ಪಡೆದಿದ್ದಾರೆ. ಸಮಾಜ ವಿಜ್ಞಾನದಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದ್ದು, ಕನ್ನಡ ಹಾಗೂ ಇತರ ವಿಷಯಗಳಲ್ಲಿ ಶೇ.99ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿದ್ದಾರೆ.
ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಪ್ರೌಢಶಾಲೆಯ ಪಂಚಮಿಗೆ ರಾಜ್ಯದ ಟಾಪರ್
ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪಂಚಮಿ ಆರ್ ಅವರು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. 625ಕ್ಕೆ 625 ಅಂಕ ಪಡೆದಿರುವ ಪಂಚಮಿ ಅವರಿಗೆ ಹಾಗೂ ಉತ್ತಮ ಫಲಿತಾಂಶ ಪಡೆದ ಸಂಸ್ಥೆಯ ಎಲ್ಲಾ ಮಕ್ಕಳಿಗೆ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ ಶುಭ ಹಾರೈಸಿ ಆಶೀರ್ವದಿಸಿದ್ದಾರೆ.
Also read: ಶಿವಮೊಗ್ಗ ಮಾಜಿ ಮೇಯರ್ ಏಳುಮಲೈ ಎಎಪಿಗೆ ಸೇರ್ಪಡೆ
ಇದೇ ಶಾಲೆಯಲ್ಲಿ ಸ್ಫೂತಿ ಆರ್. ಭರಂಗಿ 623 ಅಂಕ ಪಡೆದಿದ್ದು, ಇಂಗ್ಲೀಷ್, ಹಿಂದಿ, ಕನ್ನಡ ಹಾಗೂ ಸಮಾಜದಲ್ಲಿ ಶೇ.100ರಷ್ಟು ಅಂಕ ಪಡೆದಿದ್ದಾರೆ.
ಇಮ್ರಾನ್ ನಯಾಜ್ ಅವರು 622 ಅಂಕ ಪಡೆದಿದ್ದು, ಇಂಗ್ಲೀಷ್ ಹೊರತು ಪಡಿಸಿ ಉಳಿದ ಎಲ್ಲಾ ವಿಷಯಗಳಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದ್ದಾರೆ. ಕೆ.ಸಿ. ಚುಕ್ಕಿ ಅವರು 621ಅಂಕ ಪಡೆದಿದ್ದು, ಕನ್ನಡ ಹಾಗೂ ಇಂಗ್ಲೀಷ್, ವಿಜ್ಞಾನದಲ್ಲಿ ಶೇ100ರಷ್ಟು ಫಲಿತಾಂಶ ಪಡೆದಿದ್ದಾರೆ. ಸುಚಿಗಲ್ ಅವರು ಸಹ 620 ಅಂಕ ಪಡೆದಿದ್ದು, ವಿಶೇಷವಾಗಿ ಗಣಿತ, ವಿಜ್ಞಾನ ಹಾಗೂ ಹಿಂದಿಯಲ್ಲಿ ಶೇ.100 ಫಲಿತಾಂಶ ಪಡೆದಿದ್ದಾರೆ.
ಹೊಸನಗರ: ಕುವೆಂಪು ಶಾಲೆಗೆ ಶೇ .100ರಷ್ಟು ಫಲಿತಾಂಶ ಅಭಿನಂದನೆ
ಇಲ್ಲಿನ ಕುವೆಂಪು ವಿದ್ಯಾಶಾಲೆಯಲ್ಲಿ ಪ್ರಸ್ತುತ ಸಾಲಿನ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ಒಟ್ಟು 34 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, ಅದರಲ್ಲಿ 8 ವಿದ್ಯಾರ್ಥಿ ಅತ್ಯುತ್ತಮ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ.
23 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗು 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಗೆ ಶೇ. 100ರಷ್ಟು ಫಲಿತಾಂಶದ ಕೀರ್ತಿ ತಂದಿಟ್ಟ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕವರ್ಗ, ಮತ್ತು ಪೋಷಕರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post