ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದ ಮೂರನೇ ವಾರ್ಷಿಕೋತ್ಸವ ಜು.29 ಮತ್ತು 30ರಂದು ನವದೆಹಲಿ ಮತ್ತು ದೇಶಾದ್ಯಂತ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯ ಶಿವಮೊಗ್ಗದ ಪ್ರಭಾರಿ ಪ್ರಾಂಶುಪಾಲ ಯು.ಪಿ. ಬಿನೋಯ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಶಿಕ್ಷಣ ನೀತಿ 2020 ಮೂರನೇ ವಾರ್ಷಿಕೋತ್ಸವದೊಂದಿಗೆ 2ನೇ ಅಖಿಲ ಭಾರತೀಯ ಶಿಕ್ಷಾ ಸಂಗಮವನ್ನು ಜು.29ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾರ್ಯಕ್ರಮವನ್ನು ಶಿಕ್ಷಣ ಸಚಿವಾಲಯ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವಾಲಯ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಪ್ರಧಾನಿಗಳು ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
Also read: ಜೆಎನ್’ಎನ್’ಸಿಇ: ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿನಿ
ನೀತಿಯ ವಿವಿಧ ಉಪಕ್ರಮಗಳು
ಎನ್‍ಇಪಿ ಅಡಿ ಶಿಕ್ಷಣ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಲಾಗಿದ್ದು ಇದರಲ್ಲಿ ಮುಖ್ಯವಾಗಿ 1 ನೇ ತರಗತಿ ಪ್ರವೇಶಕ್ಕೆ ಮಗುವಿನ ವಯಸ್ಸು 6 ರಿಂದ 8 ಕ್ಕೆ ನಿಗದಿಗೊಳಿಸಲಾಗಿದೆ. ಇದು ಮೊದಲು 5 ವರ್ಷವಿತ್ತು. ಹಾಗೂ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಬಾಲವಾಟಿಕಾ ಪರಿಚಯಿಸಲಾಗಿದೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಡಿ ಶಾಲಾ ಶಿಕ್ಷಣ ಹಂತಗಳ ವಿನ್ಯಾಸಗೊಳಿಸಲಾಗಿದೆ. 3-8 ವರ್ಷಗಳು ಫೌಂಡೇಷನಲ್, 6-8 ವರ್ಷ +ಗ್ರೇಡ್1 ಮತ್ತು 2, 8-11 ವರ್ಷ ಪೂರ್ವಸಿದ್ದತೆ(ಗ್ರೇಡ್ 3-5), 11-14 ವರ್ಷ ಮಧ್ಯಮ ಹಂತ(ಗ್ರೇಡ್ 6-8) ಮತ್ತು 14-18 ವರ್ಷಗಳು ದ್ವಿತೀಯ ಹಂತ(ಗ್ರೇಡ್ 9-12).
ಆಟಿಕೆ ಆಧಾರಿತ ಶಿಕ್ಷಣಶಾಸ್ತ್ರ ಉಪಕ್ರಮದಲ್ಲಿ ಆಟಿಕೆ ಮತ್ತು ಆಟಗಳ ಮೂಲಕ ಕಲಿಕೆ, ಕಲೆಯ ಏಕೀಕರಣ ಉಪಕ್ರಮದಡಿ ಕಲೆ ಮತ್ತು ಸಂಸ್ಕøತಿಯ ವಿವಿಧ ಅಂಶಗಳನ್ನು ಮತ್ತು ಪ್ರಕಾರಗಳನ್ನು ರೂಪಿಸುವುದು. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದಲ್ಲಿ ಮೂಲಭೂತ ಗಣಿತದ ಕಾರ್ಯಾಚರಣೆ ಹಾಗೂ ಅತಿ ಪ್ರಮುಖವಾಗಿ ಮಕ್ಕಳ ಕೌಶಲ್ಯಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.ಪಠ್ಯಕ್ರಮದಲ್ಲಿ ಕೌಶಲ್ಯ ವಿಷಯದ ಏಕೀಕರಣ, ಸ್ಕಿಲ್ ಹಬ್, ಪಾಲುದಾರರಾಗಿ ಪೆÇೀಷಕರನ್ನು ಅಳವಡಿಸುವುದು, ಸಮಾನ ಮತ್ತು ಅಂತರ್ಗತ ಶಿಕ್ಷಣ, ಶಿಕ್ಷಣ ಪಲ್ಲಟ ಮತ್ತು ಶಿಕ್ಷಕರಿಗೆ ತರಬೇತಿ, ಶಿಕ್ಷಕರ ತರಬೇತಿ: ನಿಷ್ಟ 2.0 ಹಾಗೂ ಸಫಲ್ ಒಟ್ಟು 17 ಉಪಕ್ರಮಗಳಡಿ ಈ ನೀತಿಯಲ್ಲಿ ಪಠ್ಯಕ್ರಮ ಮತ್ತು ಕೌಶಲ್ಯಾಭಿವೃದ್ಧಿಯನ್ನು ಅಳವಡಿಸಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















